Tuesday, October 1, 2024

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ

ಬೀದರ್: ಜಿಲ್ಲೆಯ ಹುಮನಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಪ್ರಧಾನಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನ ಯೋಜನೆ ಅಡಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಿ, ಏಡ್ಸ್ ಜಾಗೃತಿ ಮೂಡಿಸಲಾಯಿತು.

ಸೀಮಂತ ನೆರವೇರಿಸಿ ಮಾತನಾಡಿದ ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ಸಂಗೀತಾ ಹುಲಸೂರೆ ಮಾತನಾಡಿ, ತಾಯಿಯಿಂದ ಮಗುವಿಗೆ ಎಚ್.ಐ.ವಿ ಸೋಂಕು ತಗಲುವುದನ್ನು ತಡೆಗಟ್ಟುವುದಕ್ಕಾಗಿ ಗರ್ಭಿಣಿಯರು ಆರಂಭಿಕ ಮೂರು ತಿಂಗಳು ಮುಂಚೆ ತಪಾಸಣೆ ಮಾಡಿಕೊಳ್ಳುವುದು ಅತ್ಯವಶ್ಯಕ. ಐಸಿಟಿಯುನಿಂದ ಉಚಿತ ಸಲಹೆ ಪಡೆದು ತಾಯಿ-ಮಗು ಆರೋಗ್ಯಪೂರ್ಣ ಜೀವನ ಸಾಗಿಸಬೇಕೆಂದು ತಿಳಿಸಿದರು.

ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ಎಚ್.ಐ.ವಿ ಸೋಂಕಿತರಿಗೆ ಏಡ್ಸ್ ಆಪ್ತ ಸಮಾಲೋಕರು ಉಚಿತ ಮಾರ್ಗದರ್ಶನ ನೀಡಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ತಜ್ಞವೈದ್ಯ ಡಾ.ಬಸವಂತರಾವ ಗುಮ್ಮೇದ್, ಮಹಿಳಾ ಪಿ.ಎಸ್.ಐ ಸುಜಾತಾ, ಡಾ.ವಿ.ಜಿ.ಲಕ್ಕಾ, ಡಾ.ದಿಲೀಪ ಡೋಂಗ್ರೆ, ಡಾ.ಮುಜಾಫರ್, ಏಡ್ಸ್ ಆಪ್ತ ಸಮಾಲೋಚಕಿ ಗೀತಾರೆಡ್ಡಿ ಮತ್ತಿತರರಿದ್ದರು.

ಜಿಲ್ಲೆ

ರಾಜ್ಯ

error: Content is protected !!