ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತುಳಿತಕ್ಕೆ ಒಳಗಾಗುತ್ತಾ ಬಂದಿದ್ದಾಳೆ.
ಕೆಲವು ದೇಶಗಳಲ್ಲಿ ಮಹಿಳೆಗೆ ಇತ್ತಿಚಿನವರೆಗೆ ಮತದಾನದ ಹಕ್ಕು ಇಲ್ಲದಿರುವುದು ಮಹಿಳೆಯರ ಶೋಷಣೆಗೆ ಒಳಪಡಿಸಿದ್ದೇವೆ ಎಂಬುವುದನ್ನು ಸಾಬೀತು ಮಾಡಿದ್ದೆವೆ. ಜಗತ್ತಿನ ಬಹುತೇಕ ಧರ್ಮಗಳು ಮಹಿಳೆಯನ್ನು ಎರಡನೇಯ ದರ್ಜೆಯಲ್ಲಿ ಕಂಡಿರುವುದು ಖಂಡನಾರ್ಹ.ಆದರೆ ಜಗತ್ತಿನ ಎಲ್ಲ ಜೀವ ಸಂಕುಲದ ಬೆಳವಣಿಗೆಗೆ ಮತ್ತು ಸಂತೋಷಕ್ಕೆ ಮಹಿಳೆಯ ತಾಳ್ಮೇಯೇ ಕಾರಣ.ತನ್ನ ನೋವು ನುಂಗಿಕೂಂಡು ಜಗತ್ತಿಗೆ ನಲಿವು ನೀಡುವ ಜಗನ್ಮಾತೆ ಮಹಿಳೆ.
ಪುರುಷನಿಗೆ ಸರಿಸಮಾನವಾಗಿ ಅಷ್ಟೇ ಅಲ್ಲ ಪುರುಷನಿಗೆ ಮಿಗಿಲಾಗಿ ಮಹಿಳೆ ಬದುಕಬಲ್ಲಳು,ಬೆಳೆಯಬಲ್ಲಳು ಎಂಬುವುದನ್ನು ಇ ಜಗತ್ತಿಗೆ ಸಾದರಪಡಿಸಿದ್ದಾಳೆ.ಈ ಹಿನ್ನಲೆಯಲ್ಲಿ ಜಗತ್ತಿನ ಪ್ರಖ್ಯಾತ ಮಹಾ ಮಹಿಳಾ ಮಣಿಗಳ ಸಾಲಿನಲ್ಲಿ ನಮ್ಮ ಅಖಂಡ ಬೈಲಹೂಂಗಲ ತಾಲೂಕಿನ ಮಹಿಳೆಯರ ಕೂಡುಗೆ ಹಲವಾರು ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಪ್ರಥಮವಾದುದಾಗಿದೆ.
♦ಹನ್ನೆರಡನೆಯ ಶತಮಾನದಲ್ಲಿ ಜಗತ್ತಿನ ಮನುಕುಲದ ಒಳಿತನ್ನೆ ಬಯಸಿದ ವಚನಸಾಹಿತ್ಯ ದ ಸಂರಕ್ಷಣೆ ಮಾಡುತ್ತ ಬಂದು ಬೈಲಹೂಂಗಲ ತಾಲೂಕಿನ “ತಿಗಡಿ ಗ್ರಾಮದಲ್ಲಿ ಲಿಂಗೈಕ್ಯಳಾದ ಮಹಾಶರಣೆ ಹರಳಯ್ಯನ ದರ್ಮಪತ್ನಿ ಕಲ್ಯಾಣಮ್ಮ” ಬೈಲಹೊಂಗಲದಲ್ಲಿ ಕೆಲ ದಿನಗಳನ್ನು ಕಳೆದಿರುವುದು ಬೈಲಹೂಂಗಲ ಪುಣ್ಯಭೂಮಿಯಾಗಲು ಕಾರಣವಾಯಿತು.ಇ ಮಾಹಾಮಾತೆ ತನ್ನ ಪತಿಯ ಜೋತೆ ಸೇರಿ ತನ್ನ ತೊಡೆಯ ಚರ್ಮ ತೆಗೆದು ಬಸವಣ್ಣನವರಿಗೆ ಪಾದರಕ್ಷೆ ನಿರ್ಮಿಸಿ ಕೂಟ್ಟ ಮಹಾನ ಭಾರತದ ಆದರ್ಶಮಾತೆ.
♦ಹದಿನೇಳನೆಯ ಶತಮಾನದಲ್ಲಿ ಜಗತ್ತಿನ ಸರ್ವೋಚ್ಚ ಸರ್ವಕಾಲಿಕ ರಾಜ ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ ಪ್ರಶ್ನಿಸಿದ ಬೆಳವಡಿ ವೀರರಾಣಿ ಮಲ್ಲಮ್ಮನ ಪಾದ ಸ್ಪರ್ಶದಿಂದ ಬೈಲಹೂಂಗಲದ ಕಣ ಕಣವೂ ಪವಿತ್ರವಾಯಿತು.ಅಷ್ಟೇ ಅಲ್ಲ ಜಗತ್ತಿನಲ್ಲಿ ಪ್ರಥಮವಾಗಿ 3000 ಸಾವಿರ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿ ವೀರರಾಣಿ ಮಲ್ಲಮ್ಮ ಎಂಬುವುದು ಜಗತ್ತಿನ ಮೊದಲ ವೀರರಾಣಿ ಎಂಬುವದು ಗಮನಾರ್ಹ ಅಂಶ.
♦ಸೂರ್ಯ ಮುಳುಗದ ಸಾಮ್ರಾಜ್ಯದ ಬ್ರೀಟಿಷರು ಕಿತ್ತೂರು ಕೋಟೆ ಆವರಣದಲ್ಲಿ ಕೇಂಪು ಮೂತಿಯ ಪಿರಂಗಿಗಳು ಅಸ್ತಂಗತವಾಗುವುಂತೆ ಮಾಡಿದ್ದು ಸ್ವಾತಂತ್ರದ ಬೆಳ್ಳಿ ಚುಕ್ಕಿ ವೀರರಾಣಿ ಚನ್ನಮ್ಮಾಜೀ. ಜಗತ್ತಿನ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡುವಂತಹ ಸಾಧನೆ.
ಅಷ್ಟೇ ಅಲ್ಲದೇ ತನ್ನ ಮಗನನ್ನು ಕುಟುಂಬ ರಾಜಕಾರಣದಿಂದ ದೂರ ಇಟ್ಟಂತಹ(ರಾಣಿ ಚನ್ನಮ್ಮಾಜಿಯು ತನ್ನ ಮಗ ಶಿವಬಸವರಾಜನಿಗೆ ಬೈರವಿ ಕಂಕಣ ಕಟ್ಟುವ ಮೂಲಕ ಕಿತ್ತೂರಿಗೆ ದೂರೆಯಾಗದಂತೆ ದೂರ ಸರಿಸಿ, ತನ್ನ ಅಕ್ಕನಾದ ರಾಣಿ ರುದ್ರಮ್ಮಾಜೀಯ ಮಗ ಶಿವಲಿಂಗ ರುದ್ರಸರ್ಜನನ್ನು ರಾಜನಾಗಿ ಮಾಡಿದ ಮಹಾನ ತ್ಯಾಗಮಯಿ.ಇದು ಬೈಲಹೊಂಗಲದ ಇತಿಹಾಸ ಜಗತ್ತಿನ ಇತಿಹಾಸದಲ್ಲಿ ಪುಟ ಸೇರಲು ವೇದಿಕೆ ಒದಗಿಸಿಕೂಟ್ಟಿತು.
♦ಕಿತ್ತೂರ ದೊರೆ ಮಲ್ಲಸರ್ಜ ದೇಸಾಯಿಯ ಮೊದಲ ಪತ್ನಿ ರಾಣಿ ರುದ್ರಮ್ಮ ದೇಶನೊರು ಸಮೀಪ ಜರುಗಿದ ಕದನದಲ್ಲಿ ಟಿಪ್ಪು ಮತ್ತು ಹೈದರಲಿಯ ಸೈನ್ಯವನ್ನು ಸೋಲಿಸಿರುವುದು ಬೈಲಹೊಂಗಲ ನಾಡಿನ ಮಹಿಳಾ ಶೂರತ್ವಕ್ಕೆ ಸಾಕ್ಷಿಯಾಗಿದೆ.
♦ಬ್ರಿಟಿಷ್ ರ ದಬ್ಬಾಳಿಕೆಯ ತೆರಿಗೆಯನ್ನು ಕಟ್ಟಲು ನಿರಾಕರಿಸಿ 1829 ರಲ್ಲಿಯೇ ಪ್ರತಿಭಟಿಸಿದ ಭಾರತದ ಮೊದಲ ಮಹಿಳೆ ಸಂಗೊಳ್ಳಿ ರಾಯಣ್ಣನ ತಾಯಿ ಮಾತೆ ಕೆಂಚವ್ವ ತಾಯಿಯ ದಿಟ್ಟತನ ನಾಡಿನ ಮಹಿಳಾ ಕುಲಕ್ಕೆ ಆದರ್ಶನಿಯವಾದುದು.
♦ಇನ್ನು ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ 1947ರಲ್ಲಿ ಬ್ರಿಟಿಷ್ ಅಧಿಕಾರಿ ಓರ್ವ ಬೈಲಹೂಂಗಲ ತಾಲೂಕಿನ ನಾಗನೂರು ಗ್ರಾಮದಲ್ಲಿ ಗಾಂಧಿಜೀ ಮತ್ತು ಸುಭಾಷ ಚಂದ್ರ ಭೋಸರ ಭಾವ ಚಿತ್ರವನ್ನು ಅವಮಾನಿಸಿದ ಎನ್ನುವ ಕಾರಣಕ್ಕೆ ಅದೇ ಗ್ರಾಮದ ನಾಗಮ್ಮ ರಾಚನಾಯ್ಕ ಎನ್ನುವ ಮಹಿಳೆ ಬ್ರೀಟಿಷ ಅಧಿಕಾರಿ ಮತ್ತು ಅಂದಿನ ಬೆಳಗಾವಿಯ ಮ್ಯಾಜಿಸ್ಟ್ರೇಟ್ ವೇಲ್ಸಗೆ ಕಾಲ್ಮರಿಗೆ(ಚಪ್ಪಲಿ) ತೆಗೆದುಕೊಂಡು ಹೊಡೆದಿರುವುದು ಭಾರತದ ಇತಿಹಾಸದಲ್ಲಿ ಸ್ವಾತಂತ್ರ ಹೋರಾಟಕ್ಕೆ ಬೈಲಹೂಂಗಲ ಮಹಿಳಾ ಮಣಿಗಳ ಕೊಡುಗೆ ಅನನ್ಯ ಎಂಬುವುದನ್ನು ಸಾಬಿತುಪಡಿಸಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಬದುಕಿಗೆ ಅರ್ಥ ನೀಡಿದ ತಾಯಿ,ಪತ್ನಿ,ಮಕ್ಕಳು ಸಹಪಾಠಿಗಳನ್ನು ನೆನೆಯುತ್ತಾ, ಜಗತ್ತನ ಇತಿಹಾಸದಲ್ಲಿ ರಾರಾಜಿಸುತ್ತಿರುವ ನನ್ನ ತಾಲೂಕಿನ ಮಹಿಳಾ ಮಣಿಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವಕ್ಕೆ ಬಾಜನರಾದವರು. ಅದೇ ವೇದಿಕೆಯಲ್ಲಿ ಮಹೋನ್ನತ ಸ್ಥಾನದಲ್ಲಿ ಇರುವರು ಎಂಬುವುದನ್ನು ನಾಡಿಗೆ ಮತ್ತೊಮ್ಮೆ ನೆನಪಿಸವ ಸಣ್ಣ ಪ್ರಯತ್ನ ಮಾಡುವ ಮೂಲಕ ಜಗತ್ತಿನ ಮಹಿಳೆಯರೆಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು.