ಪರೀಕ್ಷೆ ಎದುರಿಸಲು ಕಾರ್ಯಾಗಾರ ಉಪಯುಕ್ತ: ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ.ಕಾಂಬಳೆ

ಉಮೇಶ ಗೌರಿ (ಯರಡಾಲ)

ಗದಗ: ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಕಠಿಣ ಎಂದು ಭಾವಿಸಬಾರದು, ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಲಭ ಪ್ರಶ್ನೆ ಪತ್ರಿಕೆ ತಯಾರಿಸಿರುತ್ತಾರೆ ಅದರ ಪ್ರಯೋಜನ ಪಡೆದು ಪರೀಕ್ಷಾ ಪತ್ರಿಕೆ ಬರೆಯಬೇಕು ಎಂದು ಗದಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಎಂ.ಕಾಂಬಳೆ ಅಭಿಪ್ರಾಯ ಪಟ್ಟರು.

ಅವರು ಜಿಲ್ಲಾ ಇಂಗ್ಲಿಷ್ ಉಪನ್ಯಾಸಕರ ವೇದಿಕೆ, ಲಕ್ಕುಂಡಿಯಲ್ಲಿ ಆಯೋಜಿಸಿದ್ದ ಒಂದು ದಿನದ ಪ್ರಶ್ನೆ ಪತ್ರಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಗತ್ಯವೆನಿಸಿದಷ್ಟು ಚಿಕ್ಕ ಚೊಕ್ಕ ಉತ್ತರಗಳನ್ನು ಬರೆಯುವ ಜಾಣತನ ಮುಖ್ಯ, ಅದು ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಇಂಗ್ಲಿಷ್ ಉಪನ್ಯಾಸಕರ ವೇದಿಕೆ ಅರ್ಥಪೂರ್ಣ ಕಾರ್ಯ ಮಾಡಿ ರಾಜ್ಯದ ಗಮನ ಸೆಳೆದಿದೆ ಎಂದು ಇಂಗ್ಲಿಷ್ ಉಪನ್ಯಾಸಕರ ವೇದಿಕೆ ಪದಾಧಿಕಾರಿಗಳ ವಿನೂತನ ಪ್ರಯೋಗವನ್ನು ಅಭಿನಂದಿಸಿದರು.

ಕಾರ್ಯಾಗಾರದಲ್ಲಿ ಲಕ್ಕುಂಡಿ ಮತ್ತು ತಿಮ್ಮಾಪೂರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರ ಪ್ರಯೋಜನ ಪರೀಕ್ಷೆ ಮೇಲೆ ಉತ್ತಮ ಪರಿಣಾಮ ಬೀರಲಿದೆ, ಇಂಗ್ಲಿಷ್ ಕಠಿಣ ಎಂಬ ಭೀತಿಯನ್ನು ಕಾರ್ಯಾಗಾರ ದೂರ ಮಾಡುತ್ತದೆ ಎಂದು ಅತಿಥಿ, ತಿಮ್ಮಾಪೂರ ಕಾಲೇಜಿನ ಪ್ರಾಚಾರ್ಯ ಸಿದ್ದು ಯಾಪಲಪರವಿ ನುಡಿದರು. ಉಪನಿರ್ದೇಶಕರ ಮಾರ್ಗದರ್ಶನ ಕಾಲೇಜಿನ ಪ್ರಾಧ್ಯಾಪಕರುಗಳಿಗೆ ಶ್ರೀರಕ್ಷೆಯಾಗಿದೆ ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ವೇದಿಕೆ ಅಧ್ಯಕ್ಷ ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣವರ ಹಾಗೂ ಕಾರ್ಯದರ್ಶಿ ಪ್ರೊ.ರಮಾಕಾಂತ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆ ಚಟುವಟಿಕೆಗಳನ್ನು ವಿವರಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ.ಎನ್.ಕುಂಬಾರ ಪರೀಕ್ಷಾ ಸುಧಾರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಇಲಾಖೆ ಹಾಗೂ ಇಂಗ್ಲೀಷ್ ವೇದಿಕೆಯನ್ನು ಅಭಿನಂದಿಸಿದರು.

ಬಿ.ಎಚ್.ಪಾಟೀಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವಿ.ಪಾಟೀಲ ಸ್ವಾಗತಿಸಿದರು, ವಿ.ವಿ.ತಳಗಡಿ ವಂದಿಸಿದ ಕಾರ್ಯಕ್ರಮವನ್ನು ಆರ್.ಎಸ್.ಚವಡಿ ನಿರೂಪಿಸಿದರು.ವಿ.ವಿ.ಗಂಧದ, ಪಿ.ಎಫ್.ತೋಪಿನ, ಪ್ರೊ.ಆರ್.ಎನ್.ಗೌಡರ ವೇದಿಕೆ ಮೇಲೆ ಉಪಸ್ಥಿತರಿರುತ್ತಿದ್ದರು.

ಇದೇ ಸಂದರ್ಭದಲ್ಲಿ ಉಪನಿರ್ದೇಶಕರಾದ ಎಂ.ಎಂ.ಕಾಂಬಳೆ ಅವರನ್ನು ಗೌರವಿಸಲಾಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಜಿ.ಗಿರಿತಿಮ್ಮಣ್ಣವರ, ಆರ್.ಎಂ.ದೊಡ್ಡಮನಿ,ಎಸ್.ಎಸ್.ಕುರಿ ಹಾಗೂ ಆರ್.ಎಸ್.ಚವಡಿ ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";