ಸರ್ ಎಂ ವಿಶ್ವೇಶ್ವರಯ್ಶ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಮುದಗಲ್ಲ ಕೋಟೆಯ ಸ್ವಚ್ಛತಾ ಶ್ರಮದಾನ

ಉಮೇಶ ಗೌರಿ (ಯರಡಾಲ)

ಮುದಗಲ್ಲ: ಲಿಂಗಸುಗೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸರ್ ಎಂ ವಿಶ್ವೇಶ್ವರಯ್ಶ ಪದವಿಪೂರ್ವ ಮಹಾವಿದ್ಯಾಲಯ ಇವರ ವತಿಯಿಂದ ಸುಮಾರು 400ಹೆಚ್ಚು ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಇಂದು ಮುದುಗಲ್ ಕೋಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸ್ವ ಎಂದರೆ ನಮ್ಮಿಂದಲೇ ಪ್ರಾರಂಭವಾಗಬೇಕಾದ್ದು ಎಂದರ್ಥ. ಇದು ಸ್ವಚ್ಛತೆಯ ಶಪಥದಲ್ಲೂ ಅಡಗಿದೆ. ಎಂದು ಮುದಗಲ್ ಕೋಟೆ ಸ್ವಚ್ಛತೆಗೆ ದಿನದಿಂದ ದಿನಕ್ಕೆ ಶಾಲಾಕಾಲೇಜು, ಸಂಘ, ಸಂಸ್ಥೆಗಳು ವಿವಿಧ ಇಲಾಖೆ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿದ್ದಾರೆ.

ಇಂದು ಸರ್ ಎಂ ವಿಶ್ವೇಶ್ವರಯ್ಶ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೋಟೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಪ್ರಾಂಶುಪಾಲ ರಮೇಶ ತಗ್ಗಿನಮನಿ ಸ್ವಚ್ಛತಾ ಕಾರ್ಯ ಯಶಸ್ಸಿಯಾಗಲು ನಾವೆಲ್ಲರೂ ಶ್ರಮಿಸಬೇಕು. ಪ್ರತಿಯೊಬ್ಬರು ತಮ್ಮ ಸ್ವಯಂ ಪ್ರೇರಿತರಾಗಿ ಕೋಟೆಯ ಸ್ವಚ್ಛಗೊಳಿಸಿದಲ್ಲಿ ಕೋಟೆಯ ಸಂಪೂರ್ಣ ಸ್ವಚ್ಛವಾಗಲು ಸಾಧ್ಯವಿದೆ ಎಂದರು.  ಪದವಿಪೂರ್ವ ಮಹಾ ವಿದ್ಯಾಲಯದ ವಿಜ್ಞಾನ ,ಕಲಾ,ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಶಿಕ್ಷಕರಾದ ಬೀರಪ್ಪ ಜಗ್ಗಲ್,ರಾಘವೇಂದ್ರ ಕುದುರಿ, ಚನ್ನಬಸವ ಕೊಟೆ,ಮೌನೇಶ ತಗ್ಗಿನಮನಿ,ವಿರೇಶ ,ಕಿರಣ ಸರ್,ಶಿಕ್ಷಕಿಯರಾದ ಪೂಜಾ,ಶ್ವಾತಿ,ಸಹನಾ, ಹಾಗೂ ವಿಧ್ಯಾರ್ಥಿ ಗಳಾದ ಸುಷ್ಟಿ,ರೇವತಿ, ಜೋತಿ, ಯಶೋದ,ಅಲವಾರು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ರಾದ ಅಶೋಕ್ ಗೌಡ ಪಾಟೀಲ್, ಮೈಬುಸಾಬ ಬಾರಿಗಿಡ, ಎಸ್‌ ಎ ನಹೀಮ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

Share This Article
";