ಮುದಗಲ್ಲ : ಬಾಲಕಿಯರ ಸರಕಾರಿ ಪ್ರೌಢಶಾಲೆ ಮುದಗಲ್ಲನಲ್ಲಿ ಎಸ್ ಎಸ್ ಎಲ್ ಸಿ. ವಿಧ್ಯಾರ್ಥಿನಿಯರ ಪಾಲಕರ ಸಭೆ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ.
ಕಲ್ಯಾಣ ಕನಾ೯ಟಕ ಮಾನವ ಸಂಪನ್ಮೂಲ ಕೃಷಿ ಸಂಸ್ಕೃತಿ ಸಂಘ ಹಾಗೂ ವಿಕಾಸ್ ಅಕಾಡೆಮಿ ಸಹಯೋಗದಲ್ಲಿ,ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದ ಗವಿಸಿದ್ದಪ್ಪ ಸಾಹುಕಾರ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಿಕ್ಷಣ ಅಧಿಕಾರಿ ಹುಂಬಣ್ಣ ರಾಠೋಡ್ ಅವರು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ ಪರೀಕ್ಷೆಗಳು ಸಮೀಪಿ ಸುತ್ತಿರುವಂತೆ ವಿದ್ಯಾರ್ಥಿಗಳು ಆಂತರಿಕ ಒತ್ತಡಕ್ಕೆ ಒಳಗಾಗುತ್ತಾರೆ.ಅದನ್ನು ಸಮರ್ಥ ಪ್ರಯತ್ನದಿಂದ ದೂರಮಾಡಬೇಕು ಎಂದು
ಕ್ಷೇತ್ರದ ಶಿಕ್ಷಣ ಅಧಿಕಾರಿ ಹುಂಬಣ್ಣ ರಾಠೋಡ ನವರು ಮಾತನಾಡಿದರು.
ನಂತರ ಮಾತನಾಡಿದ ವಿಕಾಸ್ಅಕಾಡೆಮಿ ಸಂಚಾಲಕರಾದ ಗವಿಸಿದ್ದಪ್ಪ ಸಹುಕಾರ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎನ್ನುವುದು ಕಷ್ಟವಾಗದೆ ಇಷ್ಟವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳ ಜೊತೆಗೆ ಪೂರಕ ಪರೀಕ್ಷೆಗಳಿಗೆ ಕೂಡ ಸೂಕ್ತ ಸಿದ್ಧತೆ ಮಾಡಬೇಕಾಗಿದೆ.ಎಸ್ ಎಸ್ ಎಲ್ ಸಿ ಎಂಬುದು ಭವಿಷ್ಯದ ದೃಷ್ಟಿಯಿಂದ ಮಹತ್ವದ ಘಟ್ಟ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯ ಮುಖ್ಯ ಅತಿಥಿಗಳಾದ ಹುಂಬಣ್ಣ ರಾಠೋಡ್ ಕ್ಷೇತ್ರ ಶಿಕ್ಷಣ ಅಧಿಕಾರಿ, ಅಧ್ಯಕ್ಷತೆ ವಹಿಸಿದ ಸಿದ್ರಾಮಪ್ಪ, ಎಸ್ ಡಿ ಎಮ್ ಸಿ ಅಧ್ಯಕ್ಷರು,
ಸುನಿಲ್ ಕಮಾರ ಮುಖ್ಯ ಶಿಕ್ಷಕ ಬಾಲಚಂದ್ರ ದಾಸರ್ ಹಾಗೂ ಡಿಕೆ ಪುಜಾರಿ ಹಾಗೂ ಶಿಕ್ಷಕರಾದ ಪ್ರಭುಲಿಂಗ, ಮಲ್ಲಿಕಾರ್ಜುನ,ಶೋಬಾ,ಸೋಮಶೇಖರ್, ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ