Tuesday, October 1, 2024

ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಪದ್ಧತಿ ಮುಂದುರಿಕೆಗೆ ಆಗ್ರಹಿಸಿ ನೌಕರರಿಂದ ಪ್ರತಿಭಟನೆ

ಬೀದರ್: ಹೊಸ ಪಿಂಚಣಿ ಪದ್ಧತಿ ಕೈಬಿಟ್ಟು ಹಳೆ ಪಿಂಚಣಿ ಮುಂದುವರಿಕೆಗೆ ಆಗ್ರಹಿಸಿ, ಅನಿದಾನಿತ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಮನವಿಪತ್ರ ಸಲ್ಲಿಕೆಗೂ ಮುನ್ನ ಶ್ರೀವೀರಭದ್ರೇಶ್ವರ ವಿಜ್ಞಾನ ಪದವಿ ಕಾಲೇಜು ಪ್ರಾಧ್ಯಾಪಕ ರವೀಂದ್ರನಾಥಪ್ಪ ಮಾತನಾಡಿ, ಹೊಸ ಪಿಂಚಣಿಯ ಪದ್ಧತಿಯಿಂದ ನಿವೃತ್ತಿ ಬಳಿಕ ನೌಕರರು ಸಂಕಷ್ಟಕ್ಕೆ ಸಿಲುಕುವದರಿಂದ ಹಳೆ ಪದ್ಧತಿ ಮುಂದುವರೆಸುವ ಕುರಿತು ಬಜೆಟ ಮಂಡನೆ ವೇಳೆ ಘೋಷಿಸುವ ಮೂಲಕ ಜೀವನಾಧಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸರ್ವೋದಯ ಪ.ಪೂ ಕಾಲೇಜು ಪ್ರಾಚಾರ್ಯ ಶಾಂತವೀರ ಯಲಾಲ್ ಮಾತನಾಡಿ, ಅವೈಜ್ಞಾನಿಕ ಹೊಸ ಪಿಂಚಣಿ ಪದ್ಧತಿಯನ್ನುವ ಕೈಬಿಟ್ಟು ಹಳೆ ಪದ್ಧತಿ ಯಥಾವತ್ ಮುಂದುರೆಸಬೇಕೆಂದು ಒತ್ತಾಯಿಸಿದರು.ಅರುಣಕುಮಾರ ಕಣಜಿ, ಮಲ್ಲಿಕಾರ್ಜುನ ಟಂಕಸಾಲೀಮಠ್, ಅನೀಲಕುಮಾರ ಲದ್ದಿ, ಶಿವಕುಮಾರ ಪಾಟೀಲ, ಡಾ.ಡಿ.ಕೆ.ಬಿರಾದಾರ, ಶಾಂತಪ್ಪ ನಂದಗಿ, ಪಿ.ಸಿ.ಡೋಣಿ, ಲತಾ ಸಾಗರ್, ಮೀನಾಕ್ಷಿ ಯಡವೆ, ವಿನೋದಕುಮಾರ ಜಮಾದಾರ, ಆನಂದ, ಉಮಾ ಹೊಸಳ್ಳಿ, ಮಾರುತಿ, ಮೆಹೆಬೂಬ್, ಬಿ.ಎಸ್.ಛತ್ರಿ, ಎಸ್.ಎಸ್.ರಟಕಲೆ, ಕ್ರಾಂತಿಕುಮಾರ ಇದ್ದರು.

ಬೆಂಬಲ: ಪ್ರತಿಭಟನೆಗೆ ಅನುದಾನ ರಹಿತ ಶಿಕ್ಷಕ ವೀರಯ್ಯ ಶಿವಪೂಜಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ, ಬೆಂಬಲಿಸಿದರು.

ಜಿಲ್ಲೆ

ರಾಜ್ಯ

error: Content is protected !!