ಸಾಲಬಾಧೆ ತಳಲಾರದೆ ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆ.

ಉಮೇಶ ಗೌರಿ (ಯರಡಾಲ)

ಮಸ್ಕಿ : ಸಾಲಬಾಧೆ ತಳಲಾರದೆ ತಾಲ್ಲೂಕಿನ ಬಳಗಾನೂರು ಗ್ರಾಮದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದ ರೈತ ಬಲವಂತರಾಯ ಗೌಡ(46)ಮೃತಪಟ್ಟಿರುವ ದುರ್ದೈವಿ ರೈತ ಎಂದು ಗುರುತಿಸಲಾಗಿದೆ.

ರೈತ ಖಾಸಗಿ ಬ್ಯಾಂಕ್‌ನಲ್ಲಿ 5 ಲಕ್ಷ ರೂಪಾಯಿ, ಕೈಗಡವಾಗಿ 4 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ‌. ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಸ್ವಂತ 6 ಎಕರೆ ಜಮೀನು ಹೊಂದಿದ್ದ ರೈತ ಬಲವಂತರಾಯ ವ್ಯವಸಾಯ ಮಾಡುತ್ತಿದ್ದ, ಅತಿವೃಷ್ಟಿ ಅನಾವೃಷ್ಟಿಯಿಂದ ಸರಿಯಾಗಿ ಬೆಳೆದ ಬೆಳೆ ಕೈಗೆ ಸಿಗದ ಕಾರಣ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಇರುವುದರಿಂದ  ಮನನೊಂದ ವಿಷ ಸೇವಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಗಾನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮಂಜುನಾಥ ಕುಂಬಾರ

Share This Article
";