Tuesday, October 1, 2024

ಉಕ್ರೇನ್ ರಷ್ಯಾ ಯುದ್ಧಕ್ಕೆ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ನವೀನ್ ಬಲಿ.

ಬೆಂಗಳೂರು(ಮಾ.01): ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ದಿನೇ ದಿನೇ ಮತ್ತಷ್ಟು ಉಗ್ರವಾಗುತ್ತಿದೆ. ಅಪಾರ ಸಾವು ನೋವು ಸಂಭವಿಸಿದ್ದರೂ ಈ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಮಂಗಳವಾರ, ಖಾರ್ಕಿವ್‌ನಲ್ಲಿ, ರಷ್ಯಾ ವಾಯುದಾಳಿ ನಡೆಸಿ, ಖಾರ್ಕಿವ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸಿದೆ. ಈ ವೇಳೆ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ, ಕರ್ನಾಟಕದ ಹಾವೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಬಲಿಯಾಗಿದ್ದಾರೆ.

ಹೌದು ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ಚಲಗೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಸಾವಿನ ಸುದ್ದಿ ಆತನ ಕುಟುಂಬಕ್ಕೆ ಆಘಾತ ಕೊಟ್ಟಿದೆ. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ನವೀನ್ ಕಳೆದ ಮೂರು ದಿನಗಳ ಹಿಂದಷ್ಟೇ ಕುಟುಂಬದ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಹೀಗಿರುವಾಗ ತಾನು ಶೀಘ್ರದಲ್ಲೇ ಸೇಫಾಗಿ ಮನೆಗೆ ಬರುವುದಾಗಿ ತಿಳಿಸಿದ್ದರು.

ಇನ್ನು ನವೀನ್ ಸಾವಿನ ಸುದ್ದಿ ಲಭಿಸಿದ ಬೆನ್ನಲ್ಲೇ ಕುಟುಂಬ ಸದಸ್ಯರು ವಿದೇಶಾಂಗ ಸಚಿವಾಲಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ನವೀನ್ ಸಾವನ್ನಪ್ಪಿರುವ ಮಾಹಿತಿ ದೃಢಪಡಿಸಿದ ಸಚಿವಾಲಯದ ಅಧಿಕಾರಿ, ದಿನಸಿ ಖರೀದಿಗೆ ತೆರಳುದಾಗ ನಡೆದ ಕ್ಷಿಪಣಿ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮೃತ ವಿದ್ಯಾರ್ಥಿ ನವೀನ್ ಎಂಬುವುದನ್ನು ಆತನ ಗೆಳೆಯರೂ ಖಚಿತಪಡಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಇನ್ನು ಇದೇ ವೇಳೆ ನವೀನ್ ಮೃತದೇಹ ಯಾವಾಗ ತರುತ್ತೀರು ಎಂದು ಕೆಳಲಾಗಿದ್ದು, ಇದಕ್ಕೆ ಉತ್ತರಿಸಿದ ಅಧಿಕಾರಿ ದಯವಿಟ್ಟು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ ಎಂಬುವುದನ್ನು ಅರಿತುಕೊಳ್ಳಿ. ಅಲ್ಲಿಂದ ಮೃತದೇಹ ತರುವುದು ಕಷ್ಟ. ಸದ್ಯಕ್ಕೀಗ ನವೀನ್ ಮೃತದೇಹವನ್ನು ಶವಾಗಾರದಲ್ಲಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ. 

ಜಿಲ್ಲೆ

ರಾಜ್ಯ

error: Content is protected !!