ಬೈಲಹೊಂಗಲ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಅವರನ್ನು ಸಂಪಗಾವಿಯ ಆರ್.ಇ.ಎಸ್ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅತ್ಯಂತ ಪ್ರೀತಿಯಿಂದ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿ ಗೌರವಿಸಿದ್ದಕ್ಕೆ ನೂತನ ಅಧ್ಯಕ್ಷರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಮಾತನಾಡಿ ಅರ್ಥಪೂರ್ಣ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಪರಿಷತ್ತು ಜನರ ಮನಮುಟ್ಟಲಿ ಎಂದು ಹೇಳಿದರು. ಪರಿಷತ್ತು ಸದಾ ಕ್ರಿಯಾಶೀಲವಾಗಿದ್ದುಕೊಂಡು ನಿರಂತರವಾಗಿ ಕನ್ನಡದ ಸೇವೆಯನ್ನು ಮಾಡಲಿ ಎಂದು ಕಿವಿಮಾತು ಹೇಳಿದರು.
ಖ್ಯಾತ ಪ್ರವಚನಕಾರ್ತಿ ಪ್ರೇಮಕ್ಕ ಅಂಗಡಿ ಮಾತನಾಡಿ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಬಹುಮುಖ್ಯವಾಗಿದ್ದು ವ್ಯಕ್ತಿತ್ವ ರೂಪಿಸುವ ಅತ್ಯಮೂಲ್ಯ ಅಂಶಗಳಾಗಿವೆ ಎಂದು ಹೇಳಿದರು. ಎಲ್ಲರೂ ಕನ್ನಡದ ಪುಸ್ತಕಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಮೀನಾಕ್ಷಿ ಕುಡಸೋಮಣ್ಣವರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧಾರವಾಡದ ಚೇತನಾ ಕಾಲೇಜಿನ ಸಂಸ್ಥಾಪಕ, ಕ್ರಿಯಾಶೀಲ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗುರುಶಾಂತ ವಳಸಂಗ, ಜಗದೀಶ ಶಿದ್ನಾಳ, ಯುವ ಧುರೀಣರಾದ ದಿಗ್ವಿಜಯ ಶಿದ್ನಾಳ, ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಎನ್ ಜಿ ಓ ಅಧ್ಯಕ್ಷರಾದ ಶಿವಾನಂದ ಕುಡಸೋಮಣ್ಣವರ, ಪಿ ಡಿ ಓ ಜ್ಯೋತಿ ಉಪ್ಪಿನ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶೋಭಾ ಬುಲಾಕೆ, ಸಂಸ್ಥೆಯ ಉಪಾಧ್ಯಕ್ಷರಾದ ಮಹಾಂತೇಶ ಜಕಾತಿ, ಕಾರ್ಯದರ್ಶಿ ಬಸವರಾಜ ಶ್ರೀಶೈಲ್ ಉಳ್ಳೇಗಡ್ಡಿ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿ ದುಂಡಪ್ಪ ವಕ್ಕುಂದ, ಶಿಕ್ಷಕ ಸಂಘದ ಪ್ರತಿನಿಧಿಗಳಾದ ಎಸ್.ಡಿ ಗಂಗಣ್ಣವರ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಉಳ್ಳೇಗಡ್ಡಿ, ಮಂಜುನಾಥ ಶಿಡ್ಲೆವ್ವಗೋಳ, ಉಪಾಧ್ಯಕ್ಷ ಸುರೇಶ ದೇಶಣ್ಣವರ ಹಾಗೂ ಮಹಿಳಾ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಶಂಕರೆಪ್ಪ ಶಿದ್ನಾಳ ವಹಿಸಿದ್ದರು. ಉಮಾರೂಢ ತಲ್ಲೂರ ನಿರೂಪಿಸಿದರು. ಶ್ರೀಕಾಂತ ಉಳ್ಳೇಗಡ್ಡಿ ಸ್ವಾಗತಿಸಿದರು. ಆನಂದ ಬಡಿಗೇರ ವಂದಿಸಿದರು.