ಕಿತ್ತೂರು : ರೈತರ ಬೆಳೆಗಳಿಗೆ 7 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತರು ಹೊಸ ಕಾದರವಳ್ಳಿ (ಇಟಗಿ ಕ್ರಾಸ್) 110 ಕೆವಿ. ಕೆಪಿಟಿಸಿಎಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಮಗೆ ಹಗಲಿ 7 ಗಂಟೆ ವಿದ್ಯುತ್ ಕೊಡಬೇಕು. ನೀವು ರಾತ್ರಿ ಮೂರು ತಾಸು ಹಗಲಿ ನಾಲ್ಕು ತಾಸು ಕರೆಂಟ್ ಕೊಟ್ಟರೆ ಹೇಗೆ, ನಾವು ರಾತ್ರಿಯಲ್ಲಾ ಲೇಬರ್ ಕರೆದುಕೊಂಡು ಹೊಲದಲ್ಲಿ ಕಬ್ಬು ನಾಟಿ ಮಾಡಲು ಹೋಗಬೇಕಾಗುತ್ತದೆ ಇದರಿಂದ ಬಹಳ ತೊಂದರೆಯಾಗುತ್ತಿದೆ ದಯಮಾಡಿ ನಮಗೆ ಹಗಲಿ ವಿದ್ಯುತ್ ಕೊಡಿ ಎಂದು ರೈತರು ಕಪಿಟಿಸಿಎಲ್ ಅಧಿಕಾರಿಗಳಿಗೆ ಒತ್ತಾಯಿಸಿದರು.
ನೀವು ರಾತ್ರಿ ಮೂರು ತಾಸು ಹಗಲಿನಲ್ಲಿ ನಾಲ್ಕು ತಾಸು ಕರೆಂಟ ಕೊಡುತ್ತೀರಿ ಹಾಗೆ ನೀವು ಕೂಡ ಹಗಲಿ ನಾಲ್ಕು ತಾಸು ರಾತ್ರಿ ನಾಲ್ಕು ತಾಸು ಕೆಲಸ ಮಾಡುತ್ತಿರಿ ಏನು ಎಂದು ರೈತನೊಬ್ಬ ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ದಾಸ್ತಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಹಲವಾರು ತಿಂಗಳಿಂದ ರೈತರ ಜಮೀನಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಏಕೆ ಎಂದು ಕೇಳಿದಾಗ ಎಇಇ ಅಧಿಕಾರಿ ಎಮ್ ಕೆ ಹೀರೆಮಠ ಮಾತನಾಡಿ ಮಲಪ್ರಭಾ ನದಿಯ ಪ್ರವಾಹದಿಂದ ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು, ನದಿಯಲ್ಲಿ ನೀರು ಇರುವುದರಿಂದ ದುರಸ್ತಿ ಕಾರ್ಯ ವಿಳಂಬವಾಗಿತ್ತು. ಈಗಾಗಲೇ ದುರಸ್ತಿ ಕಾರ್ಯ ಮುಕ್ತಾಯಗೊಂಡಿದ್ದು ವಿದ್ಯುತ್ ಪೂರೈಕೆಯಾಗುತ್ತಿದೆ ಮತ್ತು ನಮ್ಮ ಸಿಬ್ಬಂದಿ ವಿನಾಕಾರಣ ಕಾರಣ ಕರೆಂಟ್ ತೆಗೆದರೆ ಅಂತರವನ್ನು ನಿರ್ಧಾಕ್ಷಿಣ್ಯವಾಗಿ ಸಸ್ಪೆಂಡ್ ಮಾಡುತ್ತೇವೆ ಎಂದು ಹೇಳಿದರು.
ಹಗಲಿ 7 ಗಂಟೆ ವಿದ್ಯುತ್ ಪೂರೈಕೆಗಾಗಿ ಮೇಲಾಧಿಕಾರಿಗಳ ಜೊತೆ ಮಾತನಾಡಿ ಮೂರು ದಿನಗಳೊಳಗೆ ತಿಳಿಸಲಾಗುದು ಎಂದು ಎಮ್ ಕೆ ಹೀರೆಮಠ ಹೇಳಿದಾಗ ರೈತರು ಧರಣಿ ಹಿಂಪಡೆದರು.
ಇದೇ ಸಂದರ್ಭದಲ್ಲಿ ದಾಸ್ತಿಕೊಪ್ಪ, ಎಮ್ ಕೆ ಹುಬ್ಬಳ್ಳಿ, ದೇವರ ಶೀಗಿಹಳ್ಳಿ ಕಾದರವಳ್ಳಿ, ಹೊಸ ಕಾದರವಳ್ಳಿ ರೈತರು ಉಪಸ್ಥಿತರಿದ್ದರು.