ಸರ್ಕಾರಿ ದಾಖಲೆ ಲಭ್ಯವಿಲ್ಲವೆಂದು ಉತ್ತರಿಸಿದರೆ! ಕ್ರಿಮಿನಲ್ ಕೇಸ್

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಕಂದಾಯ ಇಲಾಖೆ, ಸಬ್ ರಿಜಿಸ್ಟಾರ್ ಸೇರಿದಂತೆ ಇನ್ನಿತರೆ ಸರಕಾರಿ ಕಛೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 ರಂತೆ ಸಂರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಸರ್ಕಾರಿ
ಅಧಿಕಾರಿಯ ಕರ್ತವ್ಯವಾಗಿದೆ. ಅವುಗಳ ಮಾಹಿತಿಗಳನ್ನು ಕೇಳಿದರೆ “ಕಡತ ಲಭ್ಯವಿಲ್ಲ” ಎಂಬ ಸಿದ್ದ ಉತ್ತರ ಕೊಡುವವರಿಗೆ ಜೈಲು ಶಿಕ್ಷೆ ಕಾದಿದೆ ಎಂಬುದು ಕರ್ನಾಟಕ ಮಾಹಿತಿ ಆಯೋಗ ನೀಡಿರುವ ಆದೇಶದಿಂದ ತಿಳಿದುಬರುತ್ತದೆ.

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010:-2010ರಲ್ಲಿ ಜಾರಿಯಾದ ಈ ಕಾನೂನಿನಡಿ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಸಂರಕ್ಷಿಸಬೇಕಿರುತ್ತದೆ. ಅಂತಹ ದಾಖಲೆ, ಕಡತ, ಪುಸ್ತಕ ಅಥವಾ ಕಾಗದಪತ್ರಗಳು ಕಳುವಾದರೆ, ಕಾಣೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ಅಥವಾ 10 ಸಾವಿರವರೆಗಿನ ದಂಡದಿಂದ ಅಥವಾ ಇವೆರಡರಿಂದಲೂ ದಂಡಿತರಾಗಬಹುದಾದ ಕಠಿಣ ಕಾನೂನು ಇದಾಗಿದೆ.

ಸಬ್ ರಿಜಿಸ್ಟ್ರಾರ್ ಅಧಿಕಾರಿ ಪ್ರಕರಣ:-ಶಿವಕುಮಾರ್ ಎಂಬವವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಿ ದಾಖಲೆ ಕೇಳಿದರು. ಅವರು ಕೇಳಿದ “ಬೆರಳಚ್ಚು ಪುಸ್ತಕ
ಲಭ್ಯವಿಲ್ಲ ಎಂಬ ಉತ್ತರ ಸಿಕ್ಕಿತು. ಈ ಸಂಬಂಧ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಿದರು. (ಕಮಾಅ11070 ಎಪಿಎಲ್ 2014) ಇದರ ವಿಚಾರಣೆ ನಡೆಸಿದ ಆಯೋಗ ಬೆರಳಚ್ಚು ಪುಸ್ತಕ ಕಾಣೆಯಾಗಿರುವುದಕ್ಕೆ ಎಂಟು ಅಧಿಕಾರಿಗಳನ್ನು ಹೊಣೆಯಾಗಿಸಿ ಆದೇಶ ಕೊಟ್ಟಿದೆ. ಆಯೋಗದ ಆಯುಕ್ತ ಕೃಷ್ಣಮೂರ್ತಿಯವರ ನಿರ್ದೇಶನದಂತೆ ರಾಜ್ಯದಲ್ಲಿ ಬಹುಶಃ ಪ್ರಥಮ ಬಾರಿಗೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ಬಿದ್ದಿದೆ. ಈ ಪ್ರಕರಣ ಮುಂದುವರೆಯುತ್ತಿದೆ.

ನೀವು ಕೇಳಿರುವ ದಾಖಲೆ ಲಭ್ಯವಿಲ್ಲ ಎಂದರೆ:-ಯಾವುದೇ ಸರ್ಕಾರಿ ದಾಖಲೆಗಳನ್ನು ಬಯಸಿ (ಉದಾಹರಣೆ: ಮ್ಯುಟೇಷನ್, 5/6 ದಾಖಲೆ, ಕೈ ಬರಹದ ಪಹಣಿ, ದರಕಾಸ್ತು ಕಡತಗಳು, ಹಳೇ ಪಹಣಿ ಪುಸ್ತಕಗಳು, ಜನನ ಮರಣ ರಿಜಿಸ್ಟರ್ ಇತ್ಯಾದಿ.) ಮಾಹಿತಿ ಹಕ್ಕಿನ ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳಿಗೆ “ದಾಖಲೆ ಲಭ್ಯವಿಲ್ಲ”ಎಂದು ಹಿಂಬರಹ ನೀಡಿದ್ದರೆ ಅಥವಾ ನೀಡಿದರೆ; ಹಾಳೆಯಲ್ಲಿ ಸಂಬಂಧಪಟ್ಟ ಕಛೇರಿಯ ಮುಖ್ಯಸ್ಥರಿಗೆ ಪತ್ರ ಬರೆದು ಲಭ್ಯವಿಲ್ಲದ ಆಥವಾ ಕಳುವಾಗಿದೆ ಎನ್ನಲಾದ ಸರ್ಕಾರಿ ದಾಖಲೆಯನ್ನು ಪತ್ತೆ ಮಾಡಲು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 ರಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪತ್ರ ಬರೆಯಬಹುದು . ಆದಾಗ್ಯೂ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬಹುದು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";