ಹರ್ಷ ಕೊಲೆ ಖಂಡಿಸಿ 23ರಂದು ಹುಮನಾಬಾದ ಬಂದ್ ಬೃಹತ್ ಪ್ರತಿಭಟನೆ: ಲಕ್ಷ್ಮಿಕಾಂತ ಹಿಂದೊಡ್ಡಿ

ಉಮೇಶ ಗೌರಿ (ಯರಡಾಲ)

ಬೀದರ: ಶಿವಮೊಗ್ಗದಲ್ಲಿ ಬಜರಂಗದಳ ಪ್ರಮುಖ ಹರ್ಷ ಕೊಲೆ ಹಿನ್ನೆಲೆಯಲ್ಲಿ ಫೆ.23ರಂದು ಹುಮನಾಬಾದ್ ಬಂದಗೆ ಕರೆ ನೀಡಲಾಗಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡ ಲಕ್ಚ್ಮಿಕಾಂತ ಹಿಂದೊಡ್ಡಿ ತಿಳಿಸಿದರು.

ಹರ್ಷ ಕೊಲೆ ನಿಮಿತ್ತ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವತಿಯಿಂದ ಸೋಮವಾರ ರಾತ್ರಿ ನಡೆಸಲಾದ ಶ್ರದ್ದಾಂಜಲಿ ಸಭೆಯ ನಂತರ ಮಾತನಾಡಿ, ಹಿಂದೂಪರ ಸಂಘಟನೆ ರಾಜ್ಯ ಪ್ರಮುಖರು ನೀಡಿರುವ ಆದೇಶದ ಮೇರೆಗೆ ನಿರ್ಧರಿಸಲಾಗಿದೆ ಎಂದರು.

ಗುರುಸ್ವಾಮಿ, ವಿನೋದ ಜಾಜಿ, ಭದ್ರೇಶ ಜವಳಗಿ, ನವಿಲ್, ಮಧುರ ಭಙಡಾರಿ, ಮಹಾಂತೇಶ ಪೂಜಾರಿ, ಜ್ಯೋತಿಬಾ ಸಾಠೆ, ಮಹಾದೇವ ಗೌಳಿ, ಗೋಪಾಲಕೃಷ್ಣ ಮೊಹಳೆ, ಮನೋಜ ಓಂಕಾರೆ, ಶೈಲೇಂದ್ರ ಚವಾಣ ಮತ್ತಿತರರು ಇದ್ದರು.

Share This Article
";