ಬೀದರ್: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಗಳು ಬಿಡುತ್ತಿರುವ ವಿಷಪೂರಿತ ತ್ಯಾಜ್ಯ ಶೀಘ್ರ ನಿಯಂತ್ರಿಸದಿದ್ದರೇ ಸತ್ರಸ್ತರ ಜೊತೆ ಸೇರಿಕೊಂಡು ಬೀದಿಗಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಅಧಿಕಾರಿಗಳು ಮತ್ತು ಕಾರ್ಖಾನೆ ಪ್ರಮುಖರಿಗೆ ಖಡಕ್ ಎಚ್ಚರಿಕೆ ನೀಡಿದರು.
ತ್ಯಾಜ್ಯದಿಂದ ಆಗುತ್ತಿರುವ ತೊಂದರೆ ಕುರಿತು ಸಾರ್ವಜನಿಕರು ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಕೈಗಾರಿಕಾ ಪ್ರದೇಶದಕ್ಕೆ ಭೇಡಿನೀಡಿ, ಮಾತನಾಡಿ ಅವರು
ಬರ್ಯಾಡಿಸನ್, ಖಾಜಾ ಕಂಪೆನಿ, ಸತ್ಯದೀಪ, ಹೈದ್ರಾಬಾದ್ ಕೆಮಿಕಲ್, ವೀರುಪಾಕ್ಷಿ ಭೇಟಿನೀಡಿ, ಕಾರ್ಖಾನೆ ಆಡಳಿತ ಮಂಡಳಿ ಸಭೆ ನಡೆಸಿ, ಸಲಹೆ ನೀಡಿದರು.
ಈ ಕುರಿತು ಖುದ್ದು ನಾನೇ ಅನೇಕ ಬಾರಿ ಎಚ್ಚರಿಸಿದರು ಕ್ಯಾರೆ ಅನುತ್ತಿಲ್ಲ. ಸರ್ಕಾರ ನಿಯಮ ಪ್ರಕಾರ ಶೇ.70ರಷ್ಡು ಹುದ್ದೆ ಸ್ಥಳೀಯರಿಗೆ ಮೀಸಲಿಡಬೇಕು ನಿಯಮ ಉಲ್ಲಂಘಿಸಿ, ಕೂಲಿ ಕೆಲಸ ನೀಡುತ್ತಿದ್ದು ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಮಾಣಿಕನಗರ ಗ್ರಾಮ ಪಂಚಾಯುತಿ ವ್ಯಾಪ್ತ ಹಳ್ಳಿ ಜನರಿಂದ ನನ್ನ ಮನೆಯವರೆಗೂ ದಯರ್ವಾಸನೆ ಬರುತ್ತಿದೆ ಇದನ್ನು ಸರಿಪಡಿಸಲು ಸಿಪಿಐ ಮಲ್ಲಿಕಾರ್ಜುನ ಯಾತನೂರ, ಇ.ಒ, ಗೋವಿಂದ, ಪಿಡಿಒಗಳ ಸಭೆ ನಡೆಸಿ, ತ್ಯಾಜ್ಯ ವಿಲೆವಾರಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಡಿನ ಆದೇಶ ನೀಡುದರು. ಕೊಟ್ಟ ಆದೇಶ ಪಾಲಿಸದಿದ್ದರೇ ಪಂಚಾಯಿತಿ ವ್ತಾಪ್ತಿ ಜನರ ಜೊತೆಗೂಡಿ ಬೀದಿಗಳಿದು ಉಗ್ರ ಹೋರಾಟನ ನಡೆಸಲಾಗುವುದು ಎಂದು ಎಚ್ಚರುಸಿದರು.
ಈ ವೇಳೆ ಆನಂದರಾಜ ಮಹಾರಾಜ, ಚೇತನದಾಜ, ಶಾಸಕರ ಎದುರು ಅಳಲು ತೋಡಿಕೊಂಡರು. ಲಕ್ಷ್ಮಣರಾವ ಬುಳ್ಳಾ, ನರಸಿಂಗ ಮಿಶ್ರಾ, ರವಿಕುಮಾರ ಘವಾಳ್ಜರ, ಅಫ್ಸರಮಿಯ್ಯ, ಬಜರಂಗ ತಿವಾರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.