ಮುದಗಲ್ಲ; ಪುರಸಭೆಯಲ್ಲಿ ಸರ್ವಜ್ಞ ಜಯಂತಿ ಆಚರಣೆ ಮಾಡಿದರು. ಸಂತ ಕವಿ ಸರ್ವಜ್ಞ ಜಯಂತಿಗೆ ಕುಂಬಾರ ಸಮಾಜ ಹಾಗೂ ಯುವ ಪತ್ರಕರ್ತ ಮಂಜುನಾಥ ಕುಂಬಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ವೇಳೆ ವಿರೇಶ ಕುಂಬಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸರ್ವಜ್ಞ ಒಬ್ಬರು ಮಹಾನ್ ಚೇತನ, ಸಂತನೂ ಹೌದು, ಕವಿಯು ಹೌದು. ಸರ್ವಜ್ಞರು ಅಪಾರ ಜ್ಞಾನ ವುಳ್ಳವರಾಗಿದ್ದರು.ಅನಾದಿ ಕಾಲದಿಂದಲೂ ನಮ್ಮ ದೇಶದ ನಾಡು ನುಡಿ, ಸಂಸ್ಕøತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹಾತ್ಮರು ಅನೇಕರು. ಅವರೆಲ್ಲರೂ ಮುಂದಿನ ಪೀಳಿಗೆಗಾಗಿ ತಮ್ಮಲ್ಲಿ ಇರುವಂತಹ ಜ್ಞಾನವನ್ನು ನೀಡಿದ ಮಹಾ ಚೇತನಗಳು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಸಾಧಕರು ಉದಯಿಸಿ ತಮ್ಮ ಆದರ್ಶಗಳಿಂದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಖರದಲ್ಲಿ ನಿಲ್ಲಿಸಿದಂತಹ ವ್ಯಕ್ತಿಗಳಲ್ಲಿ ಅತಂತ್ಯ ಮುಖ್ಯವಾಗಿ ಕಂಡು ಬರುವಂತಹ ಸರ್ವರಿಗೂ ಜ್ಞಾನವನ್ನು ಹಂಚಿದಂತಹ ಮಹಾನ್ ಚೇತನ ನಮ್ಮ ಕವಿ ಸರ್ವಜ್ಞ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮರಿಲಿಂಗಪ್ಪ ,ಉಪಾಧ್ಯಕ್ಷ ಶಿವ ಗ್ಯಾನಪ್ಪ,ಜೆಡಿಎಸ್ ಮುಖಂಡ ತಳವಾರ ನಿಸಾರ್,ಬಸವರಾಜ, ಹಾಗೂ ಭೀಮಣ್ಣ ಕುಂಬಾರ, ವೆಂಕಟೇಶ್ ಕುಂಬಾರ ಇತರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕುಂಬಾರ