ಹುನಗುಂದದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕರವೇ ಬೆಂಬಲ

ಉಮೇಶ ಗೌರಿ (ಯರಡಾಲ)

ಹುನಗುಂದ : ತಾಲೂಕ ದಂಡಾಧಿಕಾರಿಗಳ ಕಚೇರಿ ಎದುರುಗಡೆ ರೈತರ ಹೋರಾಟ ಸತತ 6 ನೇ ದಿವಸವೂ ಮುಂದುವರೆದಿದೆ.ಈ ರೈತ ಹೋರಾಟಕ್ಕೆ ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡು  ರೈತರ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುನಗುಂದ ಇಳಕಲ್ಲ ಅವಳಿ ತಾಲ್ಲೂಕಿನ ರೈತ ಮುಖಂಡರ ನೇತೃತ್ವದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ತೊಗರಿ ಖರೀದಿ ಪುನಃ ಪ್ರಾರಂಭಿಸುವುದು ಹಾಗೂ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನೊಂದಣಿ ಹಾಗೂ ಖರೀದಿ ಪ್ರಾರಂಭಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.

ಈ ರೈತ ಹೋರಾಟಕ್ಕೆ ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶರಣು ಗಾಣಿಗೇರ್ ಬೆಂಬಲ ನೀಡಿ ಖರೀದಿ ಕೇಂದ್ರವನ್ನು ಬೇಗನೆ ಪ್ರಾರಂಭಿಸುವಂತೆ ಒತ್ತಾಯಿಸಿದರು.

ವರದಿ. ದಾವಲ್. ಶೇಡಂ

Share This Article
";