ಬೆಳಗಾವಿ:ರಾಜ್ಯ ಗೃಹ ಇಲಾಖೆಯ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ರೈಂ ಸೀನ್ ಆಫೀಸರ್ ಹುದ್ದೆಗೆ ನಿಗಧಿ ಪಡಿಸಿರುವ ವಿದ್ಯಾರ್ಹತೆಯು ವಿಧಿ ವಿಜ್ಞಾನ ಶಾಸ್ತ್ರದಲ್ಲಿ ಪದವಿ ಅಥವಾ ವಿಜ್ಞಾನ ಪದವಿ ಹಾಗೂ ಒಂದು ವರ್ಷದ ಡಿಪ್ಲೋಮ ಕೋರ್ಸ್ ನ್ನು ವಿಧಿ ವಿಜ್ಞಾನ ದಲ್ಲಿ ಹೊಂದಿರತಕ್ಕದು ಅಥವಾ ವಿಜ್ಞಾನ ಪದವಿ ಹಾಗೂ ವಿಧಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದು ಎಂಬುದಾಗಿ ಅಧಿಸೂಚಿಸಿ ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಿರುತ್ತಾರೆ.
ಆದರೆ ನಮ್ಮ ರಾಜ್ಯದಲ್ಲಿ ವಿಧಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವೇ ಕೆಲವು ಖಾಸಗಿ ಕಾಲೇಜುಗಳಲ್ಲಿ ಮಾತ್ರ ಕೋರ್ಸ್ ಲಭ್ಯ ವಿದ್ದು ಅತಿ ಕಡಿಮೆ ಸಂಖ್ಯೆಯಲ್ಲಿ ಈ ಪದವಿಯನ್ನು ಪಡೆದಿರುತ್ತಾರೆ.
ನಮ್ಮ ರಾಜ್ಯದಲ್ಲಿ ಒಂದು ವರ್ಷದ ಡಿಪ್ಲೋಮ ಕೋರ್ಸ್ ಇರುವುದಿಲ್ಲ, ಇದರಿಂದಾಗಿ ಹೊರ ರಾಜ್ಯದ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತಾರೆ.
ಈ ಹುದ್ದೆಗೆ ಇದೆ ಫೆಬ್ರವರಿ 20 ರಂದು ಪರೀಕ್ಷೆಯನ್ನು ನಿಗಧಿ ಪಡಿಸಿರುತ್ತಾರೆ. ಈ ಪರೀಕ್ಷೆಯಲ್ಲಿ ಯಾವುದೇ ಕನ್ನಡ ಕಡ್ಡಾಯ ಪತ್ರಿಕೆ ಇಲ್ಲದಿರುವುದರಿಂದ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದ ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ . ಕಡ್ಡಾಯವಾಗಿ ಕನ್ನಡ ಭಾಷೆಯ ಪರೀಕ್ಷೆ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡುಬೇಕೆಂದು ಗೃಹ ಸಚಿವರಿಗೆ ಎನ್ ಎಸ್ ಯು ಐ ರಾಜ್ಯ ಮಾಜಿ ಕಾರ್ಯದರ್ಶಿ ಮಹಾಂತೇಶ ಕಂಬಾರ ಆಗ್ರಹ ಮಾಡಿದ್ದಾರೆ.