ಮುದಗಲ್ಲ :ಸಮೀಪದ ಆಶೀಹಾಳ ತಾಂಡದಲ್ಲಿ ಸಂತ್ ಸೇವಾಲಾಲ್ ಬಂಜಾರ ಸೇವಾ ಸಂಘದಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಣೆ ಮಾಡಲಾಯಿತು.
ಆಶೀಹಾಳ ತಾಂಡ ತಾವಾಯ್ತು,ತಮ್ಮ ಕೆಲ್ಸ ಆಯ್ತು, ತಮ್ಮ ತಾಂಡಾ ಆಯ್ತು, ಇಷ್ಟೇ ಅವ್ರ ಬದುಕು.ಆದ್ರೆ ವರ್ಷಕ್ಕೊಮ್ಮೆ ಅವ್ರನ್ನೆಲ್ಲಾ ಒಟ್ಟುಗೂಡಿಸೋಕೇ ಅಂತಾನೆ ಸೇವಾಲಾಲ್ ಜಯಂತಿ ಬರುತ್ತೆ. ಆ ಜಯಂತಿಯಲ್ಲಿ ಮಾತ್ರ ಎಲ್ರೂ ಒಟ್ಟಿಗೆ ಸೇರಿ ಸಂಭ್ರಮಿಸ್ತಾರೆ.
ಆ ಸಂಭ್ರಮ ಅವರಿಗೆ ಮಾತ್ರವಲ್ದೇ ನೋಡೋರಿಗೂ ಖುಷಿ ಕೊಡುತ್ತೆ. ಫುಲ್ ಜೋಶ್.ಎಲ್ಲರ ಮುಖದಲ್ಲೂ ಖುಷಿಯೋ ಖುಷಿ. ವರ್ಷಕ್ಕೊಮ್ಮೆ ಸಿಗೋ ಇಂಥಾ ಚಾನ್ಸ್ನ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ. ಹಿಂಗಾಗೇ ಆಗಿದ್ದಾಗ್ಲಿ ಅಂತಾ ಎಲ್ರೂ ಕುಣಿದು ಕುಪ್ಪಳಿಸ್ತಿದ್ರು.
ನಿನ್ನೆ ಅಕ್ಷರಶಃ ಬಂಜಾರ ಮಯವಾಗಿತ್ತು. ಎತ್ತ ನೋಡಿದ್ರು ಕಲರ್ ಫುಲ್ ಉಡುಗೆ ತೊಟ್ಟ ಯುವಕ ಯುವತಿಯರೆ ಕಾಣ್ತಿದ್ರು.
ಡಿಜೆ ಸೌಂಡಿಗೆ ಮನಬಿಚ್ಚಿ ಕುಣಿದಿದ್ರು. ಸಂತ ಸೇವಾಲಾಲ್ರ 283ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಸೇವಾಲಾಲ್ ಭಾವಚಿತ್ರವನ್ನ ತಾಂಡದಲ್ಲಿ ಮೆರವಣಿಗೆ ಮಾಡಲಾಯಿತು…
ಈ ಸಂದರ್ಭದಲ್ಲಿ ಸಂತ್ ಸೇವಾಲಾಲ್ ಬಂಜಾರ ಸೇವಾ ಸಂಘದ ಅಧ್ಯಕ್ಷ ಅನಿಲ್ ನಾಯ್ಕ್, ವಿನೋದ್ ರಾಠೋಡ್ ಸಂತ್ ಸೇವಾಲಾಲ್ ಬಂಜಾರ ಸೇವಾ ಸಂಘದ ಕಾರ್ಯದರ್ಶಿ,
,ಹಾಗೂ ದೇವಪ್ಪ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಹಾಗೂ ತಿಪ್ಪಣ್ಣ ಗ್ರಾಮ ಪಂಚಾಯತ್ ಸದಸ್ಯರು,ಊರಿನ ಹಿರಿಯರಾದ ಮಾನಪ್ಪ ನಾಯ್ಕ್, ಪ್ರೇಮಸಿಂಗ್ ರಾಠೋಡ್, ಬದ್ದೆಪ್ಪ ಪೂಜಾರಿ, ಹರಿಚಂದ್ರ ಪೂಜಾರಿ ,ಇತರರು ಉಪಸ್ಥಿತರಿದ್ದರು,
ವರದಿ: ಮಂಜುನಾಥ ಕುಂಬಾರ