ಮುದಗಲ್ಲ:ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿದೇ೯ಶನಾಲಯ ಇಂದ ಏಕ ಬಳಿಕೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮುದಗಲ್ಲ ಪುರಸಭೆ ಮುಂದೆ LED ಪರದೆ ಮುಖಾಂತರ ಜನರಿಗೆ ಜಾಗೃತಿ ಮೂಡಿಸವಾಯಿತ್ತು.
ಪ್ಲಾಸ್ಟಿಕ್ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್ ಉತ್ಪನ್ನಗಳು ದೊರೆಯುವುದರಿಂದ ಮಾನವನು ಈ ವಸ್ತುವಿಗೆ ಅವಲಂಬಿತನಾಗಿದ್ದಾನೆ.
ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಅಗ್ರಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಈ ಪ್ಲಾಸ್ಟಿಕ್ ತ್ಯಾಜ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಂದು ಪ್ಲಾಸ್ಟಿಕ್ ತ್ಯಾಜ್ಯ ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ವನ್ನುಂಟು ಮಾಡುತ್ತಿವೆ.
ಪ್ಲಾಸ್ಟಿಕ್‌ಗಳಲ್ಲಿ ಬಿಸೆನಾಲ್ ಎ (ಬಿಪಿಎ), ಥಾಲೇಟ್‌ಗಳು, ಆಂಟಿಮಿನಿಟ್ರಾಕ್ಸೆ„ಡ್, ಪಾಲಿ-ಫ್ಲೋರಿನೇಟೆಡ್, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇವೆ.
ಅವು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವ ಅಂಶಗಳಾಗಿವೆ ಅಲವಾರು ವಿಡಿಯೋ ಮುಖಾಂತರ ಮೂಲಕ ಪ್ರದರ್ಶನ ಮಾಡ ಲಾಯಿತು.
ಈ ಸಂದರ್ಭದಲ್ಲಿ ಮುದಗಲ್ಲ ಪುರಸಭೆಯ ಮುಖ್ಯಾಧಿಕಾರಿ ಮರಿಲಿಂಗಪ್ಪ, ನೈಮಲ್ಯ ಅಧಿಕಾರಿ,ಮಹೇಶ .ಕೆ. ಸಿಬ್ಬಂದಿ ಚನ್ನಮ್ಮ, ಜಿಲಾನಿಪಾಶ, ನಿಸಾರ್,ನಿತ್ಯಾ,ಅಕ್ಷತಾ,ವಿನೋದ ,ಇತರರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ