ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ವಿಧಿವಶ: ಬೈಲಹೊಂಗಲ ಕಸಾಪ ತೀವ್ರ ಸಂತಾಪ

ಬೈಲಹೊಂಗಲ: ಚೆಂಬೆಳಕಿನ ಕವಿ ಎಂದೇ ಖ್ಯಾತರಾದ ನಾಡೋಜ ಡಾ.ಚನ್ನವೀರ ಕಣವಿ ನಮ್ಮನ್ನೆಲ್ಲ ಅಗಲಿರುವುದು ತೀವ್ರ ದುಃಖದ ಸಂಗತಿಯಾಗಿದೆ ಎಂದು ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್ ಠಕ್ಕಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿಯಾದ ಅವಿಸ್ಮರಣೀಯ ಬದುಕಿನ ಸಾರ್ಥಕ ಕ್ಷಣವನ್ನು ಸ್ಮರಿಸಿಕೊಂಡು ಕಣವಿಯವರ ನಿಧನದಿಂದ ಕನ್ನಡ ಸಾಹಿತ್ಯದ ಹಿರಿಯ ಕೊಂಡಿ ಕಳಚಿದಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಕಾಶ ಮೆಳವಂಕಿ ಅವರು ಕಣವಿಯವರ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಜೀವಧ್ವನಿ ಮುಂತಾದ ಮೌಲ್ಯಯುತ ಕವನ ಸಂಕಲನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಮಹಾಕವಿಯ ನಿಧನದಿಂದ ಕರುನಾಡು ದುಃಖತಪ್ತವಾಗಿದೆ ಎಂದು ಹೇಳಿದರು. ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ ಅವರು ಉಲ್ಲಾಸ, ಜೀವನ ಪ್ರೀತಿ ಹಾಗೂ ಜೀವನೋತ್ಸಾಹದಿಂದ ತುಂಬಿದ 93 ವರ್ಷಗಳ ಕಣವಿಯವರ ಸಾರ್ಥಕ ಬದುಕು ಎಲ್ಲರಿಗೂ ಆದರ್ಶ ಎಂದು ಕಂಬನಿ ಮಿಡಿದರು. ಗೌರವ ಕೋಶಾಧ್ಯಕ್ಷ ಮಹೇಶ ಕೋಟಗಿ ಅವರು ಚನ್ನವೀರ ಕಣವಿಯವರು ಬಸವ ಗುರು ಕಾರುಣ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳನ್ನು ಪಡೆದಿದ್ದು ಅವರ ವಿದಾಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ಪರಿಷತ್ತಿನ ಮಾರ್ಗದರ್ಶಿ ಮಂಡಳಿಯ ಸದಸ್ಯರಾದ ಶಿವರಂಜನ ಬೋಳನ್ನವರ, ಈಶ್ವರ ಹೋಟಿ, ಸಿ.ಕೆ ಮೆಕ್ಕೇದ, ಮೋಹನ ಬಸನಗೌಡ ಪಾಟೀಲ, ಮಹಾಂತೇಶ ತುರಮರಿ, ಎಸ್.ಡಿ ಗಂಗನ್ನವರ, ಬಿ.ಕೆ ತಲ್ಲೂರ, ಎಂ.ಡಿ ನಂದೆನ್ನವರ ಕಣವಿಯವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಾಲ್ಲೂಕಾ ಪರಿಷತ್ತಿನ ಪದಾಧಿಕಾರಿಗಳಾದ ಶಿವಾನಂದ ಕುಡಸೋಮಣ್ಣವರ, ರಾಮಕೃಷ್ಣ ಹೋಟಕರ, ಗಿರಿಮಲ್ಲಪ್ಪ ಬೆಳವಡಿ, ಭೀಮಪ್ಪ ಕಸಾಳೆ, ಪ್ರೇಮಾ ಅಂಗಡಿ, ಶಶಿಕಲಾ ಯಲಿಗಾರ, ಎ.ಎನ್ ಪ್ಯಾಟಿ, ಗೌರಾದೇವಿ ತಾಳಿಕೋಟಿಮಠ, ಅನಿಲಕುಮಾರ ರಾಜಣ್ಣವರ, ಶ್ರೀಕಾಂತ ಉಳ್ಳೇಗಡ್ಡಿ, ಸಂತೋಷ ಹಡಪದ, ಲಕ್ಷ್ಮೀ ಮುಗಡ್ಲಿಮಠ, ದುಂಡಪ್ಪ ಗರಗದ, ಸಂತೋಷ ಪಾಟೀಲ ಅಗಲಿದ ಹಿರಿಯ ಚೇತನಕ್ಕೆ ಭಾವನಮನ ಸಲ್ಲಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";