ಬೆಳಗಾವಿ : ನಾಡಿನ ಅಪೂರ್ವ ಸಾಹಿತಿಗಳಲ್ಲಿ ಒಬ್ಬರಾದ ಚೆಂಬಳಿಕಿನ ಕವಿ ಡಾ. ಚನ್ನವೀರ ಕಣವಿ ನಿಧನ ನಿಜಕ್ಕೂ ಅಘಾತವನ್ನುಂಟುಮಾಡಿದೆ.
ಹೊಸಗನ್ನಡ ಕಾವ್ಯದ 2 ನೇ ತಲೆಮಾರಿನ ಕವಿ, ಪ್ರಕೃತಿಲೀಲೆ, ಪ್ರಣಯ, ದಾಂಪತ್ಯ, ವಾತ್ಸಲ್ಯದಂತಹ ರಮ್ಯ ಪರಂಪರೆಯ ವಿಷಯಗಳು ಅವರ ಕೃತಿಗಳಲ್ಲಿ ಕಾಣಸಿಗುತ್ತವೆ. ಚನ್ನವೀರ ಕಣವಿ ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಶ್ರೇಷ್ಠಕವಿ, ಜೊತೆಗೆ ವಿಮರ್ಶಕರಾಗಿದ್ದವರು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಿಧನದಿಂದಾಗಿ ಕನ್ನಡನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಠವುಂಟಾಗಿದ್ದು ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದೆ ಎಂದು ಕಂಬನಿ ಮಿಡಿಯುವದರ ಜೊತೆಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನ ಸಮಸ್ತ ಕಾರ್ಯಕಾರಿ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.