ಮುದಗಲ್ಲ: ಐತಿಹಾಸಿಕ ಕೋಟೆ ಸ್ವಚ್ಛತೆಗೆ ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರು ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕೋಟೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ. ಐದು ನೂರು ವರ್ಷಗಳ ಇತಿಹಾಸ ವಿರುವ ಅಮೆರಿಕಾ ದೇಶದವರು ತಮ್ಮ ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಆದರೆ ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದ್ದರು, ಸ್ಮಾರಕಗಳ ರಕ್ಷಣೆಗೆ ಯಾರೂ ಮುಂದಾಗದಿರುವುದು ದುರಂತ.
ನಾನು ಮುದಗಲ್ ಕೋಟೆಗೆ 5 ತಿಂಗಳ ಹಿಂದೆ ಭೇಟಿ ನೀಡಿದ್ದೆ.ಕೋಟೆ ತುಂಬಾ ಮುಳ್ಳು ಕಂಟಿ ಬೆಳೆದಿದ್ದವು. ನನಗೆ ಬೇಸರವಾಯಿತು. ಕೋಟೆ ಸ್ವಚ್ಛತೆ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೆ. ಕೊರೊನಾ ಮತ್ತು ಮಳೆಗಾಲ ಕಾರಣದಿಂದ ಆ ಕಡೆ ಗಮನ ಕೊಡಲು ಸಾಧ್ಯವಾಗಲಿಲ್ಲ. ವಕೀಲರ ಸಂಘ ಹಾಗೂ ಸಾರ್ವಜನಿಕರೇ ಸ್ವಚ್ಛತೆಗೆ ಮುಂದೆ ಬಂದಿರುವುದು ಸಂತಸ ತಂದಿದೆ.
ಸರ್ಕಾರ ಮಾಡಬೇಕಾದ ಕೆಲಸ ಸ್ವತ ತಾವೇ ಸ್ವಚ್ಛತೆ ಮಾಡುವುದು ಬಹಳ ಸಂತೋಷವಾಯಿತು. ಕೋಟೆ ರಕ್ಷಣೆ ಜತೆಗೆ ನಮ್ಮ ಭಾಷೆ, ಕಲೆ ಸಂಸ್ಕೃತಿ ಉಳಿಸುವದು ಅಷ್ಟೇ ಮುಖ್ಯ, ಕೋಟೆ ಸ್ವಚ್ಛತೆ ಮೊದಲನೇ ಹೆಜ್ಜೆ. ನಂತರ ಕೋಟೆ ಉತ್ಸವ ಮಾಡಲು ಎಲ್ಲರೂ ಪ್ರಯತ್ನೆಸೋಣ ಎಂದರು..
ಗುರುಬಸ್ಸಪ್ಪ್ ಸಜ್ಜನ್, ಅಶೋಕ ಗೌಡ ಪಾಟೀಲ, ವಕೀಲರಾದ ಆಶಿಕ್ ಅಹ್ಮದ್, ಕುಪ್ಟಣ್ಣ ಮಾಣಿಕ್ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಮುಖ್ಯಧಿಕಾರಿ ಮರಿಲಿಂಗಪ್ಪ, ಉಪ ತಹಶೀಲ್ದಾರ್ ತುಳಜಾ ರಾಮಸಿಂಗ್, ವಕೀಲ ನಾಗರಾಜ ಗಸ್ತಿ, ನಿವೃತ್ತ ಮುಖ್ಯ ಶಿಕ್ಷಕ ಹಾಜಿಮಲಂಗ ಬಾಬ, ಸಂತೋಷ ಸುರಪುರ, ಸಾಧೀಕ್ ಅಲಿ , ಮಲ್ಲಪ್ಪ ಮಾಟೂರ್, ಮಹೆಬೂಬ ಕಡ್ಡಿಪುಡಿ, ಷಣ್ಮುಕಪ್ಪ ಚಲವಾದಿ, ಬಸವರಾಜ ಜಲ್ಲಿ, ಸಂಗಪ್ಪ ಹೀರೆಮನಿ, ಮಹೆಬೋಬ್ ಬಾರಿಗಿಡ ಇದ್ದರು.
ವರದಿ: ಮಂಜುನಾಥ ಕುಂಬಾರ