ಚಿಕ್ಕಬಳ್ಳಾಪುರ : ಇಡೀ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದ್ದು, ಪ್ರಪಂಚದ ಅಭಿವೃದ್ಧಿ ರಾಷ್ಟ್ರಗಳ ಜಿಡಿಪಿ ಕುಸಿದಿರುವಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತ ಕೊರೋನಾವನ್ನು ಸಮರ್ಥವಾಗಿ ಎದುರಿಸಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಆತ್ಮನಿರ್ಭರ ಭಾರತ ಬಜೆಟ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಬಜೆಟ್ ಮುಂದಿನ 25 ವರ್ಷಗಳಲ್ಲಿ ಭಾರತದ ಸಮಗ್ರ ಪ್ರಗತಿಯ ನೀಲಿನಕ್ಷೆಯನ್ನು ಹೊಂದಲು ಪ್ರಯತ್ನಿಸುತ್ತಿದೆ ಸ್ವಾತಂತ್ರೊತ್ತರದ ನಂತರ ಪ್ರಥಮ ಬಾರಿಗೆ ಭಾರತ ಎಂಬ ದೂರದೃಷ್ಟಿ ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರದ ಬಜೆಟ್ ಹೊಂದಿದೆ.
ಆರ್ಥಿಕತೆಯ ಚೇತರಿಕೆಗೆ ಭಾರತದ ಬಲವಾದ ಸ್ಥಿತಿ ಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ ಪ್ರಸ್ತುತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಎಲ್ಲ ದೊಡ್ಡ ದರದಲ್ಲಿ ಶೇ 9.2% ಅತ್ಯಧಿಕವಾಗಿದೆ ಎಂದು ಅಂದಾಜಿಸಲಾಗಿದೆ ಹಾಗೂ ಆರ್ಥಿಕತೆಗಳು ಮತ್ತು ಸಬ್ ಕಾ ಪ್ರಯಾಸ್ ದೊಂದಿಗೆ ಬಲವಾದ ಬೆಳವಣಿಗೆಯ ಪ್ರಮಾಣವನ್ನು ಮುಂದುವರಿಸಲಾಗುತ್ತಿದೆ ಎಂದವರು ತಿಳಿಸಿದರು.
ಪ್ರಮುಖವಾಗಿ ಡಿಜಿಟಲ್ ಆರ್ಥಿಕತೆ ತಂತ್ರಜ್ಞಾನವನ್ನು ಉತ್ತೇಜಿಸುವುದು, ಅಭಿವೃದ್ದಿ, ಶಕ್ತಿ ಪರಿವರ್ತನೆ, ಮತ್ತು ಹವಾಮಾನ ಕ್ರಿಯೆ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಲಸಿಕೆ ಕಾರ್ಯಕ್ರಮ ತ್ವರಿತ ಅನುಷ್ಠಾನ ಹಾಗೂ ಸಾಂಕ್ರಾಮಿಕ ರೋಗವನ್ನು ಚೇತರಿಸಿ ಕೊಳ್ಳುವ ಪ್ರಕ್ರಿಯೆಯಲ್ಲಿ ಮುಂದಾಗಿದೆ ಎಂದರು.
ಪ್ರಧಾನಮಂತ್ರಿ ಗತಿ ಶಕ್ತಿಯು ಆರ್ಥಿಕತೆಯನ್ನು ಮುಂದಕ್ಕೆ ಎಳೆಯುತ್ತದೆ ಮತ್ತು ಹೆಚ್ಚಿನ ಉದ್ಯೋಗಗಳು ಮಗು ಅವಕಾಶಗಳಿಗೆ ಕಾರಣವಾಗುತ್ತದೆ ಯುವಕರು ಪಿಎಂ ಗತಿ ಶಕ್ತಿಯೂ ಬಹುಮಾದರಿ ಸಂಪರ್ಕಕ್ಕಾಗಿ 7ಎಂಜಿನ್ನುಗಳನ್ನು ಒಳಗೊಂಡಿರುತ್ತದೆ ಎಂದವರು ತಿಳಿಸಿದರು
ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನ ದೊಂದಿಗೆ ರಾಜ್ಯಗಳಿಗೆ ಅನುಕೂಲ ಮಾಡಿಕೊಡು ತ್ತೇವೆ ವೇಗವನ್ನು ಹೆಚ್ಚಿಸಲು ಸರ್ಕಾರದಿಂದ 20,000 ಕೋಟಿ ರುಪಾಯಿಗಳ ಮೂಲಕ ಜನ ಮತ್ತು ಸರಕುಗಳ ಸಾಗಾಣಿಕೆ ಮೂಲವಾಗಿ ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು, ಲಾಜಿಸ್ಟಿಕ್ಸ್ ಸೇರಿದಂತೆ 2022-2023 ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿಲೋಮೀಟರುಗಳಷ್ಟು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷದ ಬಜೆಟ್ ಗಾತ್ರ 39.45ಲಕ್ಷ ಕೋಟಿ ರೂ ಸಂಬಂಧಿಸಿದಂತೆ ಬಜೆಟ್ ಮುಖ್ಯಾಂಶಗಳು ;
,ದೇಶದ 5ನದಿಗಳ ಜೋಡಣೆಗೆ 44,605 ಕೋಟಿ ರೂ, ಕಾವೇರಿ ನದಿ ಸೇರಿದಂತೆ ಗೋದಾವರಿ-ಕೃಷ್ಣಾ, ಪೆನ್ನಾರ್-ಕಾವೇರಿ, ದಮನ್ ಗಂಗಾ-ಪಿನ್ ಜಾಲ, ಪಾರ್ ತಾಪಿ-ನರ್ಮದಾ ಈ 5ನದಿ ಜೋಡಣೆಗಳಿಗೆ ಡಿಪಿಆರ್ ಸಿದ್ಧಗೊಳಿಸಿ ಕಾರ್ಯಯೋಜನೆ ರೂಪಿಸುವುದು ಸೇರಿದಂತೆ ಇಂತಹ ಅತ್ಯದ್ಭುತವಾದಂತಹ ಸರಿಸುಮಾರು ರಷ್ಟು ಕ್ರಿಯಾಶೀಲತೆ ಯೋಜನೆಗಳನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧಿಕಾರದ ಪರ್ವದಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಮಾಧ್ಯಮ ವಕ್ತಾರ ರಮೇಶ್ ಬಾಯರಿ, ಜಿಲ್ಲಾ ಸಹವಕ್ತಾರ ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಜಿಲ್ಲಾ ಮಾಧ್ಯಮ ಪ್ರಮುಖ್ ವಿ.ಮಧುಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಆನಂದ್ ಎಂ. ಚಿಕ್ಕಬಳ್ಳಾಪುರ