ಶನಿವಾರ ಇಬಾಹ್ರಿಂ ಸುತಾರ ಅವರ ಜೀವನ ಸಂದೇಶದ ಕುರಿತು ಕಸಾಪದಿಂದ ವೆಬಿನಾರ್. 

ಕಸಾಪ ಬೆಳಗಾವಿ
ಉಮೇಶ ಗೌರಿ (ಯರಡಾಲ)

ಬೆಳಗಾವಿ.10: ಇತ್ತೀಚೆಗೆ ನಮ್ಮನ್ನಗಲಿದ ಕನ್ನಡ ನಾಡಿನ ಶ್ರೇಷ್ಠ ಪ್ರವಚನಕಾರ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರಿಗೆ ಶೃದ್ದಾಂಜಲಿ ಸಲ್ಲಿಸುವದರ ಜೊತೆಗೆ ಅವರ ಜೀವನ ಸಂದೇಶದ ಕುರಿತು ಶನಿವಾರ ಫೆ.12  ರಂದು ಸಂಜೆ 5 ಗಂಟೆಗೆ ಕಸಾಪ ಚಿಕ್ಕೋಡಿ ತಾಲೂಕಾ ಘಟಕದಿಂದ ವೆಬಿನಾರನ್ನು ಗೂಗಲ್ ಮೀಟ್ ಮುಖಾಂತರ ಆಯೋಜಿಸಲಾಗಿದೆ ಎಂದು ಕಸಾಪ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಡಾ.ಸುರೇಶ ಉಕ್ಕಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಬಕವಿ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಇಬ್ರಾಹಿಂ ಸುತಾರ ಅವರ ಜೀವನ ಸಂದೇಶದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ  ಮಂಗಲಾ ಮೆಟಗುಡ್ಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.http//meet.google.com/mdd-pdue-veh ಈ ಕೊಂಡಿ ಬಳಸಿಕೊಂಡು ವೆಬಿನಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಯೋಜಕರಾದ ಕಸಾಪ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಡಾ.ಸುರೇಶ ಉಕ್ಕಲಿ ವಿನಂತಿಸಿದ್ದಾರೆ.

Share This Article
";