ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗಿಲ್ಲ ಸ್ಥಾನಮಾನ: ಹೋರಾಟದ ಮೂಲಕ ಪಡೆಯಬೇಕೆ..? ಮಹಿಳೆಯರ ಅಸಮಾಧಾನ

ಉಮೇಶ ಗೌರಿ (ಯರಡಾಲ)

ಹುಬ್ಬಳ್ಳಿ: ಮಹಿಳೆ ಅಬಲೆ ಅಲ್ಲ ಸಬಲೆ ಎಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿರೂಪಿಸುತ್ತಾ ಬಂದಿದ್ದಾರೆ. ಆದರೆ ಕೆಲವೊಂದು ರಾಜಕೀಯ ಬೆಳವಣಿಗೆಯಲ್ಲಿ ಮಹಿಳೆಯರು ಕೆಲವೊಂದು ಬಾರಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರೂ ಈಗ ಸರಿಯಾದ ಸ್ಥಾನಮಾನ ಸಿಗದೇ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಹೌದು.‌‌ ಹುಬ್ಬಳ್ಳಿಯಲ್ಲಿ  ಸಾಹಿತ್ಯ ಪರಿಷತ್ತಿನ ಯುವ ಸಾಹಿತಿಗಳಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಹಿಳಾ ಸಾಹಿತಿಗಳು ಪ್ರತಿಭಟನೆ ಹಾದಿ ಹಿಡಿಯುತ್ತಿದ್ದಾರೆ. ಅಲ್ಲದೇ ಚುನಾವಣೆಯಲ್ಲಿಯೂ ಕೂಡ ಮಹಿಳೆಯರನ್ನು ಕಡೆಗಣಿಸಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಅಲ್ಲದೇ ಅನಾದಿಕಾಲದಿಂದಲೂ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲದೆ ಹಲವಾರು ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಾ ಬಂದಿರುವ ಮಹಿಳೆಯರಿಗೆ ಸೂಕ್ತ ಗೌರವ ಹಾಗೂ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದಾರೆ.

ಇನ್ನೂ ಇತ್ತಿಚೆಗೆ ನಡೆದ ಧಾರವಾಡ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬೈಲಾದ ನಿಯಮ ಉಲ್ಲಂಘನೆ ಮಾಡಿ ಚುನಾವಣೆ ಮಾಡಲಾಗಿದೆ. ಅಲ್ಲದೇ ಇದರಲ್ಲಿ ಯಾವುದೇ ಮಹಿಳೆಯರಿಗೆ ಸೂಕ್ತ ಸ್ಥಾನಮಾನವಾಗಲಿ ಅವಕಾಶವಾಗಲಿ ನೀಡಿಲ್ಲ. ಪರಿಶಿಷ್ಟ ಪಂಗಡಕ್ಕೆ-01, ಮಹಿಳೆಯರಿಗೆ-03,ಸಂಘ-ಸಂಸ್ಥೆಗಳಿಗೆ-01 ಹೀಗೆ ಸರ್ವರನ್ನು ಸೇರಿಸಿಕೊಳ್ಳಬೇಕಾದ ಜಿಲ್ಲಾಧ್ಯಕ್ಷರು ನಿಯಮ ಉಲ್ಲಂಘನೆ ಮಾಡಿ ಬೇಕಾಬಿಟ್ಟಿಯಾಗಿ ಚುನಾವಣೆ ನಡೆಸಿದ್ದಾರೆ ಎಂದು ಸಾಹಿತಿ ಉಷಾ ಬೆಳ್ಳಟ್ಟಿ ಗಂಭೀರ ಆರೋಪ ಮಾಡಿದ್ದಾರೆ.  

ಇದೆ ವೇಳೆ ಸಾಮಾಜಿಕ ಹೋರಾಟಗಾರ ಸಂಜೀವ ಮಾತನಾಡಿ ಒಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಮಹಿಳೆಯರಿಗೆ ರಾಜಕೀಯ ಕೈಗಳ ಷಡ್ಯಂತ್ರದಿಂದ ಅವಕಾಶ ವಂಚನೆಯಾಗುತ್ತಿರುವುದು ವಿಪರ್ಯಾಸಕರ ಸಂಗತಿಯಾಗಿದೆ‌. ಈ ಬಗ್ಗೆ ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Share This Article
";