Monday, September 30, 2024

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ರಬಕವಿ-ಬನಹಟ್ಟಿಯಲ್ಲಿ ಕಲ್ಲು ತೂರಾಟ

ಬಾಗಲಕೋಟೆ: ಕರ್ನಾಟಕದ ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್ V/s ಕೇಸರಿ ಶಾಲು ವಿವಾದ ಕ್ರಮೇಣವಾಗಿ ಇಡೀ ರಾಜ್ಯಕ್ಕೆ ವ್ಯಾಪಿಸುತ್ತಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ಪಟ್ಟಣದ ಪಿಯು ಕಾಲೇಜಿನ ಮೇಲೆ ಕಲ್ಲುತೂರಾಟ ನಡೆದಿದೆ.

ನಗರದ ಪದವಿ ಪೂರ್ವ ಕಾಲೇಜಿನ ಎದುರಿನಲ್ಲಿ ಒಂದು ಗುಂಪಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕೇಸರಿ ಶಾಲುಗಳನ್ನು ಹಾಕಿಕೊಂಡು ಬಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

Koo App

#ಹಿಜಾಬ್_ವಿವಾದ ಹಿಜಾಬ್ ಧರಿಸುವುದರ ಬಗ್ಗೆ ತಕರಾರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ಸಾಂಪ್ರದಾಯಕವಾಗಿ ಮುಸ್ಲಿಂ ಸಮುದಾಯದವರು ಹೆಣ್ಣುಮಕ್ಕಳನ್ನು ಬುರ್ಖಾ ಧರಿಸದೆ ಹೊರಗೆ ಹೋಗಲು ಬಿಡುವುದಿಲ್ಲ. ಕೆಲವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಮನೆಯಲ್ಲಿ ಸ್ವಲ್ಪ ಸ್ವಾತಂತ್ರ ಕೊಡುತ್ತಿದ್ದಾರೆ. ಆದರೆ ಅನೇಕರು ಇನ್ನೂ ಸಾಂಪ್ರದಾಯಕವಾಗಿ ಉಳಿದಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದೇ ಮುಖ್ಯ ಉದ್ದೇಶ ಆಗಿರುವಾಗ ಈ ರೀತಿ ತಕರಾರುಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ.

Chandana Gowda (@chandana_somashekar) 8 Feb 2022

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆ ನಡೆಸುತ್ತಿದ್ದಾಗ. ಈ ಮಧ್ಯೆ ಕೆಲವು ಕಿಡಿಗೇಡಿಗಳು ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.

ಹಿಜಾಬ್ ಧರಿಸಿ ಬಂದ ವಿಧ್ಯಾರ್ಥಿನಿಯರಿಗೆ ಪೋಷಕರ ಸಾಥ್

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪದವಿ ಪೂರ್ವ ಕಾಲೇಜಿನ ಬಳಿ ಕೆಲವು ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಹಿಜಾಬ್ ಧರಿಸಿ ಬಂದಿರುವ ವಿದ್ಯಾರ್ಥಿನಿಯರಿಗೆ ಪೋಷಕರು ಸಾಥ್ ನೀಡಿದ್ದಾರೆ.

ರಾಜ್ಯ ಸರ್ಕಾರ ಸಮವಸ್ತ್ರ ಆದೇಶಿಸಿದ್ದರೂ ರಾಜ್ಯದ ಅನೇಕ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಬಿಸಿ ಇನ್ನೂ ಹೆಚ್ಚಾಗಿದೆ. ಇದರ ನಡುವೆ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ.

Koo App

#ಹಿಜಾಬ್_ವಿವಾದ ನಮ್ಮ ಭಾರತ ಪ್ರಜಾ ಪ್ರಭುತ್ವ ರಾಷ್ಟ್ರ . ಪ್ರಜೆಗಳ ನಿರ್ಣಯವೇ ಅಂತಿಮ. ನನ್ನ ಪ್ರಕಾರ ಮುಸ್ಲಿಮರು ಇಜಾಬ್ ದರಿಸಲಿ , ಆದರೆ ಅವರವರ ಸಂಪ್ರದಾಯ ಅವರವರ ಚೌಕ್ಕಟಿನಲ್ಲಿ ಇರಲಿ . ಶಾಲಾ ಕಾಲೇಜು ಇದೆಲ್ಲಾ ವಿದ್ಯಾಭ್ಯಾಸ ಕಲಿಯುವ ಸ್ಥಳ . ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು ಎಂಬುದು ನನ್ನ ಅಭಿಪ್ರಾಯ . ಅವರವರ ಸಂಪ್ರದಾಯ ಅವರವರ ಮನೆಯಲ್ಲಿ ಇರಲಿ ಹೊರ ಸಮಾಜದಲ್ಲಿ ಅಲ್ಲ . ಯಾವ ಸಂಪ್ರದಾಯಕ್ಕೂ ಅಡ್ಡಿ ಬೇಡ , ಅವರು ಬೇರೆಯವರಂತೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಅಷ್ಟೇ ಮುಖ್ಯ.

Meghana N (@Meghana_NON2H4) 8 Feb 2022

ರಾಜ್ಯದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳು ಹರಡಿದ್ದು, ಮಂಡ್ಯ ವಿಶ್ವವಿದ್ಯಾನಿಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಘೋಷಣೆ ಕೂಗಿದರು. ಕಳೆದ ಒಂದು ವಾರದಿಂದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಹುಡುಗಿಯರು ಹಿಜಾಬ್ ಅನ್ನು ದೂರವಿಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದಾರೆ.

 

ಜಿಲ್ಲೆ

ರಾಜ್ಯ

error: Content is protected !!