ಬೆಳಗಾವಿ: ಜೈ ಕಿಸಾನ ಖಾಸಗಿ ಮಾರುಕಟ್ಟೆ ರದ್ದುಪಡಿಸುವ ಸಲುವಾಗಿ ನಡೆದ ಅಹೋರಾತ್ರಿ ಧರಣಿ ಸ್ಥಳಕ್ಕೆ ಇವತ್ತು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಚರ್ಚಿಸಿದ ವಿಷಯಗಳು ತೃಪ್ತಿ ತರದ ಕಾರಣ ಮತ್ತೆ ಇಂದು ಕೈಗೊಂಡ ಅನಿರ್ದಿಷ್ಟ ಆಮರಣ ಉಪವಾಸ ಮುಂದುವರೆಸಲು ತೀರ್ಮಾನಿಸಲಾಯಿತು.
ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹಾಗೂ ವರ್ತಕರ ಸಂಘದ ಪ್ರತಿನಿಧಿ ಸತೀಶ ಪಾಟೀಲ ಉಪವಾಸ ನಿರತ ಹೋರಾಟಗಾರರು ಉಪವಾಸವನ್ನು ಮುಂದುವರೆಸಿದರು.
ಹೋರಾಟಗಾರರ ಬೇಡಿಕೆಯಂತೆ ತನಿಖಾ ಸಮಿತಿಯನ್ನು ಆಪಾದಿತ ಅಧಿಕಾರಿಗಳನ್ನು ಹೊರತು ಪಡಿಸಿ ಬೇರೆ 5 ಜನ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡುವುದಕ್ಕೆ ಮಾತ್ರ ಜಿಲ್ಲಾಧಿಕಾರಿಗಳ ಸಂದಾನ ಸಭೆ ಅಷ್ಟಕ್ಕೆ ಸಮೀತವಾಯಿತು. ತನಿಖೆ ಮುಗಿಯುವವರೆಗೆ ಖಾಸಗಿ ಜೈ ಕಿಸಾನ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾ ನಿರತ ಹೋರಾಟಗಾರರು ಪಟ್ಟು ಹಿಡಿದಾಗ ಜಿಲ್ಲಾಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ ಧರಣಾ ಸ್ಥಳದಿಂದ ಹೊರ ನಡೆದರು. ಅನಿರ್ದಿಷ್ಟ ಧರಣಿ, ಇವತ್ತಿನಿಂದ ಕೈಗೊಂಡ ಆಮರಣ
ಉಪವಾಸ ಸತ್ಯಾಗ್ರಹ 5 ನೇ ದಿವಸ ಯಶಸ್ವಿಯಾಯಿತು.
ಇವತ್ತಿನ ಹೋರಾಟಕ್ಕೆ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ಹಾಗೂ ಪದಾಧಿಕಾರಿಗಳು, ಜಿ.ವಿ. ಕುಲಕರ್ಣಿ ಸಿಆಯ್ಟಿಯು, ರವಿ ಪಾಟೀಲ ಕೂಅ ನೇಕಾರ ಕಾರ್ಮಿಕರ ಸಂಘ, ಶಂಕರ ಅಂಬಲಿ ರಾಜ್ಯಾಧ್ಯಕ್ಷರು ಕರ್ನಾಟಕ ರೈತ ಸೇನೆ ಗದಗ, ಶಂಕರಗೌಡ ಪಾಟೀಲ ಕರ್ನಾಟಕ ರೈತ ಸೇನೆ ಬೆಳಗಾವಿ, ಅಪ್ಪಾಸಾಹೇಬ ದೇಸಾಯಿ (ಕಡೋಲಿ) ಧರಮರಾಜ ಗೌಡರ್ ಅಧ್ಯಕ್ಷರು ನೇಗಿಲಯೋಗಿ ಸುರಕ್ಷಾ ರೈತ ಸಂಘ ಹಾಗೂ ಮಹಿಳಾ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ವ್ಯಾಪಕವಾಗಿ ಬೆಂಬಲ ವ್ಯಕ್ತಪಡಿಸಿದರು.