ವೃದ್ಧ ದಂಪತಿ ಮನೆಗೆ ಅನಿರೀಕ್ಷಿತ ಭೇಟಿ ನೀಡಿದ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್!ದಂಪತಿಗಳ ಕಣ್ಣಲ್ಲಿ ಆನಂದ ಭಾಷ್ಪ

ಉಮೇಶ ಗೌರಿ (ಯರಡಾಲ)

ಬೆಳಗಾವಿ (ಫೆ.07):  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದ ವಯೋವೃದ್ಧ ದಂಪತಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಅವರು ಅಚಾನಕ್ಕಾಗಿ ಅವರ ಮನೆಗೇ ತೆರಳಿ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಮನೆಯ ಹಿರಿಯ ಮಗಳಂತೆ ಬಂದ ಶಾಸಕರ ಮೇಲೆ ದಂಪತಿ ತೋರಿದ ವಾತ್ಸಲ್ಯ, ಹೃದಯಸ್ಪರ್ಷಿ ಕ್ಷಣಕ್ಕೆ ಸಾಕ್ಷಿಯಾಯಿತು.

ತಾರಿಹಾಳದ ವೃದ್ಧ ದಂಪತಿ ಬಾಳಪ್ಪ ನಿಂಗಪ್ಪ ಜೋಗಣ್ಣವರ ಹಾಗೂ ಅವರ ಧರ್ಮಪತ್ನಿ ನಿಂಗವ್ವ ಬಾಳಪ್ಪ ಜೋಗಣ್ಣವರ, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಇವರು ಶಾಸಕರನ್ನು ಭೇಟಿ ಮಾಡುವ ಇಚ್ಛೆ ಹೊಂದಿದ್ದರು. ಈ ವಿಷಯ ತಿಳಿದ ತಕ್ಷಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸ್ವತಃ ತಾರಿಹಾಳದ ವಯೋವೃದ್ಧ ದಂಪತಿಯ ಮನೆಗೆ ತೆರಳಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಲು ಸ್ವತಃ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಮನೆಗೆ ಆಗಮಿಸಿದ್ದನ್ನು ಕಂಡು ಬಾಳಪ್ಪ ಮತ್ತು ನಿಂಗವ್ವ ದಂಪತಿಯ ಕಣ್ಣಲ್ಲಿ ಆನಂದ ಬಾಷ್ಪ ಸುರಿದವು. ತಮ್ಮನ್ನು ಮನೆಯ ಹಿರಿಯ ಮಗಳಂತೆ ಕಂಡ ವೃದ್ಧ ದಂಪತಿಯ ಪ್ರೀತಿ ವಾತ್ಸಲ್ಯದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾವುಕರಾದರು.

Koo App

ನನ್ನ ಕ್ಷೇತ್ರದ ತಾರಿಹಾಳ ಗ್ರಾಮದ ತಾಯಿ ತಂದೆಯ ಸ್ವರೂಪದಂತಿರುವ ಶ್ರೀ ಬಾಳಪ್ಪ ನಿಂಗಪ್ಪ ಜೋಗಣ್ಣವರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ‌ ನಿಂಗವ್ವ ಬಾಳಪ್ಪ ಜೋಗಣ್ಣವರ, ಕಳೆದ ಎರಡು ತಿಂಗಳಿನಿಂದ ಮೈಗೆ ಹುಷಾರ್ ಇರಲಿಲ್ಲ, ಇವರಿಬ್ಬರೂ ನನ್ನ ದೊಡ್ಡ ಅಭಿಮಾನಿಗಳೆಂದು ತಿಳಿಯಲ್ಪಟ್ಟಿದ್ದೆ. ನನ್ನ ಬಗ್ಗೆ ತಿಳಿದ ದಿನದಿಂದ ನನ್ನನ್ನು ತಮ್ಮ ಮನೆಯ ದೊಡ್ಡ ಮಗಳಂತೆ ಕಾಣುತ್ತಿದ್ದರು. 1/5

Laxmi Hebbalkar (@laxmihebbalkar) 7 Feb 2022

 ಈ ಹಿರಿಯ ಜೀವಿಗಳು ತೋರಿದ ಅಕ್ಕರೆ, ಪ್ರೋತ್ಸಾಹ, ವಿಶ್ವಾಸ ಕಂಡು ಶಾಸಕರ ಮನಸ್ಸು ತುಂಬಿಬಂದಿತು. ಶಾಸಕರು ಹಿರಿಯ ಜೀವಿಗಳ ಆಶೀರ್ವಾದ ಪಡೆದು ಧನ್ಯತಾಭಾವ ವ್ಯಕ್ತಪಡಿಸಿದರು. ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಜನಪ್ರತಿನಿಧಿಗಳ ಮೇಲೆ ಜನಸಾಮಾನ್ಯರು ಎಷ್ಟೊಂದು ಅನುಬಂಧ ಹೊಂದುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು.

ಇಂತಹ ಒಂದು ಅಭಿಮಾನಕ್ಕೆ, ಸಂಬಂಧಕ್ಕೆ ಯಾವ ಬೆಲೆ ಕಟ್ಟಲು ಸಾಧ್ಯವಿಲ್ಲ, ಇಂಥಹ ಪ್ರೀತಿ, ವಿಶ್ವಾಸ ಜಾತಿ ಭಾಷೆಯ ಗಡಿ ಮೀರಿದ್ದು ಮಾನವತ್ವದಿಂದ ಹೊರಹೊಮ್ಮುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿರುವುದಕ್ಕೆ ಈ ಹಿರಿಯ ಜೀವಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕಿ ಭಾವುಕರಾಗಿ ನುಡಿದರು.

ಈ ಹಿರಿಯ ಜೀವಿಗಳ ಅಭಿಮಾನಕ್ಕೆ ನನ್ನ ಹೃದಯಸ್ಪರ್ಶಿ ಶಿರಸಾಷ್ಟಾಂಗ ನಮಸ್ಕಾರಗಳು. ಇವರಿಬ್ಬರೂ ಶತಾಯುಷಿಗಳಾಗಲಿ, ಭಗವಂತ ಇವರಿಗೆ ಹೆಚ್ಚಿನ ಆರೋಗ್ಯ ಭಾಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸಿ, ಅವರ ಅಭಿಮಾನಕ್ಕೆ ನಾನು ಸದಾಕಾಲ ಋಣಿಯಾಗಿರ್ತಿನಿ, ನಿಮ್ಮ ಪ್ರೀತಿ, ಪ್ರೋತ್ಸಾಹ, ವಿಶ್ವಾಸಕ್ಕೆ ನಿಮ್ಮ ಮನೆಯ ಮಗಳಾಗಿ ನಿಮಗೆ ಅಭಿಮಾನ ತರುವಂತ ಕೆಲಸ ಮಾಡ್ತಿನಿ.

                                    ◆ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";