ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದ ಮಂಗಲಾ ಮೆಟಗುಡ್ಡ.

ಉಮೇಶ ಗೌರಿ (ಯರಡಾಲ)

ಬೆಳಗಾವಿ (04) : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದದ ಜೊತೆಗೆ ಕನ್ನಡ–ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಆಬಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಳಗಾವಿ ಜಿಲ್ಲಾ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ತಾಲೂಕಾ ಘಟಕಗಳಿಗೆ ನೂತನ ಅಧ್ಯಕ್ಷರುಗಳನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು:-

ಮಂಗಲಾ ಶ್ರೀಶೈಲ ಮೆಟಗುಡ್ಡ (ಅಧ್ಯಕ್ಷರು), ಮಹಾಂತೇಶ ಮೆಣಸಿನಕಾಯಿ, ಸುನೀಲ್ ಎನ್ ಹಲವಾಯಿ (ಗೌರವ ಕಾರ‍್ಯದರ್ಶಿಗಳು), ರತ್ನಪ್ರಭಾ ವಿ ಬೆಲ್ಲದ (ಗೌರವ ಕೋಶಾಧ್ಯಕ್ಷರು), ತಾಲೂಕಾ ಅಧ್ಯಕ್ಷರನ್ನಾಗಿ ಸುರೇಶ ಹಂಜಿ(ಬೆಳಗಾವಿ), ಪ್ರಕಾಶ ಬಸವಪ್ರಭು ಅವಲಕ್ಕಿ (ಹುಕ್ಕೇರಿ), ಬಸಪ್ರಭು ಶಿದ್ದಲಿಂಗಯ್ಯ ಹಿರೇಮಠ (ಖಾನಾಪೂರ), ಪಾಂಡುರಂಗ ಜಟಗನ್ನವರ (ರಾಮದುರ್ಗ), ಭಾರತಿ ಮದಭಾವಿ (ಗೋಕಾಕ), ಡಾ.ಯಲ್ಲಪ್ಪ ಮ ಯಾಕೊಳ್ಳಿ (ಸವದತ್ತಿ), ನಿಂಗಪ್ಪ ಆರ್ ಠಕ್ಕಾಯಿ (ಬೈಲಹೊಂಗಲ), ಡಾ.ಸುರೇಶ ಬಸಲಿಂಗಪ್ಪ ಉಕ್ಕಲಿ (ಚಿಕ್ಕೋಡಿ), ಈರಣ್ಣ ಮಹಾದೇವ ಶಿರಗಾವಿ (ನಿಪ್ಪಾಣಿ), ಡಾ. ಶಿದಗೌಡ ಅಲಗೌಡ ಕಾಗೆ (ಕಾಗವಾಡ), ಡಾ.ಶ್ರೀಕಾಂತ ಬೈಲಪ್ಪ ದಳವಾಯಿ (ಕಿತ್ತೂರ), ರವೀಂದ್ರ ಮಲಗೌಡ ಪಾಟೀಲ (ರಾಯಬಾಗ) ತಮ್ಮಣ್ಣ ಎಮ್ ಕಾಮಣ್ಣವರ (ಯರಗಟ್ಟಿ), ಮಲ್ಲಿಕಾರ್ಜುನ ಗಂಗಪ್ಪ ಕನಶೆಟ್ಟಿ (ಅಥಣಿ) ಡಾ.ಸಂಜಯ ಅಪ್ಪಯ್ಯ ಸಿಂದಿಹಟ್ಟಿ (ಮೂಡಲಗಿ), ಜಯಶೀಲಾ ಬ್ಯಾಕೋಡ, ಮತ್ತು ಪ್ರತಿಭಾ ಅಡಿವಯ್ಯ ಕಳ್ಳಿಮಠ (ಮಹಿಳಾ ಪ್ರತಿನಿಧಿಗಳು), ಅವಳೆಕುಮಾರ, ಮಲ್ಲಿಕಾರ್ಜುನ ಸೆದೆಪ್ಪ ಕೋಳಿ (ಪರಿಶಿಷ್ಠ ಜಾತಿ ಪ್ರತಿನಿಧಿಗಳು), ಎಫ್ ವಾಯ್ ತಳವಾರ (ಪರಿಶಿಷ್ಠ ಪಂಗಡ ಪ್ರತಿನಿಧಿ), ಚನ್ನಪ್ಪ ಘಟಿಗೆಪ್ಪ ಪಾಟೀಲ (ಸಂಘ ಸಂಸ್ಥೆ ಪ್ರತಿನಿಧಿ), ಗುರುನಾಥ ಕಡಬೂರು (ಜಿಲ್ಲಾ ವಾರ್ತಾಧಿಕಾರಿ), ವಿದ್ಯಾವತಿ ಭಜಂತ್ರಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು), ವಿದ್ಯಾವತಿ ಆರ್ ಜನವಾಡೆ, ವೀರಭದ್ರ ಮ ಅಂಗಡಿ (ಗಡಿ ಜಿಲ್ಲಾ ಘಟಕ ವಿಶೇಷ ಪ್ರತಿನಿಧಿಗಳು) ಆಕಾಶ ಅರವಿಂದ ಥಬಾಜ, ಶಿವಾನಂದ ತಲ್ಲೂರ, ಪದ್ಮರಾಜ ವೈಜಣ್ಣವರ, ಮಹಾದೇವ ಬಳಿಗಾರ, ಡಾ.ಜಗದೀಶ ಹಾರುಗೊಪ್ಪ, ಅಪ್ಪಾಸಾಹೇಬ ಮ ಅಲಿಬಾದಿ, ಶ್ರೀಮತಿ ಜಯಶ್ರೀ ನಿರಾಕಾರಿ, ಶ್ರೀಮತಿ ಭಾರತಿ ಮಠದ, ಶ್ರೀಮತಿ ರೋಹಿಣಿ ಯಾದವಾಡ, ಶ್ರೀಮತಿ ಸುಧಾ ಪಾಟೀಲ (ಜಿಲ್ಲಾ ಘಟಕದ ವಿಶೇಷ ಆಹ್ವಾನಿತ ಗಣ್ಯರು)

ಬೆಳಗಾವಿಯ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಫೆಬ್ರುವರಿ 6 ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿರುವ ಧ್ವಜ ಹಸ್ತಾಂತರ ಕಾರ‍್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಧ್ವಜ ಹಸ್ತಾಂತರಿಸುವುದರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ಕನ್ನಡ ನಾಡು ನುಡಿ ನೆಲದ ರಕ್ಷಣೆ ಹಾಗೂ ಅಭಿವೃದ್ದಿ ಕಾರ‍್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";