ಬೆಂಗಳೂರು: ವಿತ್ತಸಚಿವೆ ನಿರ್ಮಲಾ ಸೀತಾರಾಮಣ ರವರು ಮಂಡಿಸಿದ ಬಜೆಟ್ 2022 ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಜೊತೆಗೆ ಪ್ರಗತಿಗೆ ವೇಗವರ್ಧಕವಾಗಿದ್ದು, ಸಾಂಕ್ರಾಮಿಕದ ಸವಾಲುಗಳನ್ನು ಹಿಮ್ಮೆಟ್ಟಿಸಿ, ಸ್ವಾವಲಂಬಿ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಬ್ ಕಾ ವಿಕಾಸ್ ಬದ್ಧತೆಗೆ ನಿದರ್ಶನವಾಗಿದೆ.
ವಿಶೇಷವಾಗಿ ಕಾವೇರಿ ಸೇರಿದಂತೆ ನದಿಗಳ ಜೋಡಣೆ, ಉದ್ಯೋಗ ಸೃಷ್ಟಿ, 3.8 ಕೋಟಿ ಕುಟುಂಬಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲು 60,000 ಕೋಟಿ ರೂ, ಕೃಷಿ, ಪಿಎಂ ಗತಿಶಕ್ತಿ, ಆರೋಗ್ಯ ಸೇವೆ, ಹೂಡಿಕೆ ಉತ್ತೇಜನ ವಲಯಗಳಿಗೆ ಆದ್ಯತೆ ನೀಡಿರುವುದು ರಾಜ್ಯದ ಬೆಳವಣಿಗೆಗೆ ಗಣನೀಯ ನೆರವು ನೀಡಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.