ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಪ್ರತಿ ವರ್ಷ ಪದ್ದತಿಯಂತೆ ಫೆ 2 ರಂದು ಪಟ್ಟಣದ ದಾನಿಗಳ ಮತ್ತು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಣಿ ಚನ್ನಮ್ಮ ನವ ಭಾರತ ಸೇನೆ ವತಿಯಿಂದ ಸ್ವಾತಂತ್ರದ ಕಿಡಿ ಹೊತ್ತಿಸಿ ಬ್ರಿಟಿಷರ ವಿರುದ್ಧ ಖಡ್ಗವನ್ನು ಕೈಗೆತ್ತಿಕೊಂಡ ಸ್ವಾತಂತ್ರ ಹೋರಾಟದ ಪ್ರಥಮ ವೀರ ಮಹಿಳೆ ಇಡಿಗಳಾದರೆ ಬದುಕುವೆವು ಬಿಡಿಗಳಾದರೆ ಸಾಯುವೆವು ಎಂಬ ಒಗ್ಗಟ್ಟಿನ ಮಂತ್ರ ಭೋದಿಸಿದ ರಾಷ್ಟ್ರಮಾತೆ ಕಿತ್ತೂರು ರಾಣಿ ಚನ್ನಮ್ಮನವರ 193 ನೇ ಸ್ಮರಣೋತ್ಸವ ದಿನದ ನಿಮಿತ್ತ ಫೆಬ್ರುವರಿ 2 ರಂದು ಮದ್ಯಾಹ್ನ ೧೨ ಘಂಟೆಗೆ ಅನ್ನ ಪ್ರಸಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅರಣ್ಯ ಇಲಾಖೆಯ ಸಂಜಯ ಮಗದುಮ್, ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಪರ್ವೀಜ ಹವಾಲ್ದಾರ, ಶ್ರೀಕಾಂತ ದಳವಾಯಿ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಹಣುಮಂತ ಲಂಗೋಟಿ, ಪಟ್ಟಣ ಪಂಚಾಯತ ಸಿಬ್ಬಂದಿ, ಪಟ್ಟಣ ಪಂಚಾಯತ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಎಮ್. ಎಫ್. ಜಕಾತಿ, ಆರೋಗ್ಯ ಇಲಾಖೆ ಸೇರಿದಂತೆ ಪಟ್ಟಣದ ಅನೇಕ ದಾನಿಗಳ ಸಹಾಯದಿಂದ ರಾಣಿ ಚನ್ನಮ್ಮ ನವ ಭಾರತ ಸೇನೆಯ ಸಂಚಾಲಕ ಜಗದೀಶ ಕಡೋಲಿ ಅವರ ಐದು ವರ್ಷಗಳ ಸತತ ಪರಿಶ್ರಮದಿಂದ ಮಾಡಿಕೊಂಡು ಬರುತ್ತಿದ್ದು ಸುಮಾರು ಐದು ನೂರಕ್ಕೂ ಜನರು ಪ್ರಸಾದ ಮಾಡುತ್ತಾರೆ ಎಂದು ರಾಣಿ ಚನ್ನಮ್ಮ ನವ ಭಾರತ ಸೇನೆಯ ಸಂಚಾಲಕ ಜಗದೀಶ ಕಡೋಲಿ ತಿಳಿಸಿದ್ದಾರೆ.
ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರಕ್ಕೆ ನೆರವೇರುವ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸೇವನೆ ಮಾಡಬೇಕು ಎಂದು ಮನವಿ ಮಾಡಿದರು