Saturday, September 21, 2024

ಉತ್ತರ ಪ್ರದೇಶದಲ್ಲಿ ಬಿಜೆಪಿ ತೊರೆದು ಬೇರೆ ಬೇರೆ ಪಕ್ಷಗಳಿಗೆ ಹೋಗಲು ಅಸಲಿ ಕಾರಣ ಇಲ್ಲಿದೆ.

ಸುದ್ದಿ ಸದ್ದು ನ್ಯೂಸ್

ಭಾರತೀಯ ಜನತಾ ಪಕ್ಷದಲ್ಲಿ ವಯಸ್ಸಾದ, ಕೆಲಸ ಮಾಡದ, ಪಕ್ಷದ ವಿರುದ್ಧ ಮಾತಾಡಿದ, ಪಕ್ಷ ಸಂಘಟನೆ ಮಾಡದ, ಜನರೊಂದಿಗೆ ಬೆರೆಯದ, ಎಂದೂ ಸ್ವಕ್ಷೇತ್ರದ ಒಡನಾಟ ಇಟ್ಟುಕೊಳ್ಳದ, ಬೇರೆ ಪಕ್ಷದಿಂದ ಅಧಿಕಾರಕ್ಕಾಗಿ ಬಂದವರ ಪಟ್ಟಿಯನ್ನು ಒಂದು ವರ್ಷದ ಹಿಂದೆಯೇ ವರಿಷ್ಠರು ಪಡೆದುಕೊಂಡು ಅವರಿಗೆಲ್ಲಾ ಸರಿಯಾದ ಮಾರ್ಗದರ್ಶನ ಮಾಡುವುದರ ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಎಚ್ಚರಿಕೆಯನ್ನೂ ಧಿಕ್ಕರಿಸಿ ತಮ್ಮ ಹಳೆಯ ಚಾಳಿ ಬಿಡದ ಸುಮಾರು 185 ಸಚಿವರ, ಶಾಸಕರ, ಅಧ್ಯಕ್ಷರ, ನಾಯಕರ ಪಟ್ಟಿಯನ್ನು 6 ತಿಂಗಳ ಹಿಂದೆ ಕಪ್ಪು ಪಟ್ಟಿಗೆ ಸೇರಿಸಿ ಅವರುಗಳಿಗೆ ಮುಂದಿನ ಬಾರಿ ಪಕ್ಷದಿಂದ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ನಿರ್ಧರಿಸಿದೆ. ಪಕ್ಷಕ್ಕೆ ನಿಷ್ಠರಾಗಿ ಪಕ್ಷದ ಬೆಳವಣಿಗೆಯಲ್ಲಿ ಭಾಗವಹಿಸಿ ನಿಮ್ಮ ಸಾಧನೆ ತೋರಿಸಿ ಎಂದು ಹಲವಾರು ಬಾರಿ ಅವಕಾಶಗಳನ್ನೂ ಕೊಟ್ಟಿದ್ದಾರೆ. ಎಲ್ಲವನ್ನೂ ಗಾಳಿಗೆ ತೂರಿದ ಹಲವರನ್ನು ನೇರವಾಗಿ ಕರೆದು ನಿಮ್ಮ ನಿರ್ಧಾರ ನೀವು ತಗೊಬಹುದು ಎಂದು ಬಿಜೆಪಿ ಹೇಳಿದ ಹಿನ್ನೆಲೆಯಲ್ಲಿ ಈ ಸಗಟು ರಾಜೀನಾಮೆಗಳು.

ಹೊಸಬರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ, ಭಾರತವನ್ನು ಬಲಿಷ್ಠ ಮಾಡಲು ಬಿಜೆಪಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಒಬ್ಬ ರಾಜೀನಾಮೆ ಕೊಟ್ಟ ಕ್ಷೇತ್ರದಲ್ಲಿ ಸುಮಾರು 10-15 ಯುವ ನಾಯಕರ, ನಿಷ್ಠಾವಂತರ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಮುಂದಿನ ಬಾರಿ 50% ಹೊಸ ಮುಖಗಳೇ ಆರಿಸಿ ಬರಲಿವೆ. ಇದನ್ನೆಲ್ಲಾ ಮಾಧ್ಯಮಗಳು ಪ್ರಸಾರ ಮಾಡಲ್ಲಾ, ಕಾರಣ ಅವರಿಗೂ ಗೊತ್ತಿಲ್ಲದಂತೆ ನಡೆಯುವ ಪಕ್ಷದ ಶಿಸ್ತಿನ ನಡೆ ಇದು. ಎಷ್ಟೇ ಪ್ರಭಾವಿ ಇದ್ದರೂ ಹಣವೊಂದೇ ಲೆಕ್ಕಕ್ಕೆ ಪಡೆಯುವುದಿಲ್ಲ. ದೇಶಾಭಿಮಾನ, ಹಿಂದುತ್ವದ ಗುಣ ಮೈಗೂಡಿಸಿಕೊಂಡು ಮುನ್ನುಗ್ಗುವ ಪ್ರಾಮಾಣಿಕ ನಾಯಕರತ್ತ ಭಾರತೀಯ ಜನತಾ ಪಕ್ಷ ಕೈಬೀಸಿದೆ.

ಈ ತರಹದ ನಿರ್ಧಾರವನ್ನು ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅನುಸರಿಸುತ್ತಿರುವ ವಿನೂತನ ಪದ್ದತಿ. ಪಕ್ಷದ ನಿಯಮಗಳಿಗೆ ಧಕ್ಕೆ ಬರದಂತೆ ದೇಶದ ಚುಕ್ಕಾಣಿ ಹಿಡಿದು ಹಿಂದುತ್ವ ಗಟ್ಟಿಯಾಗಿ ಬೇರು ಊರುವಂತೆ ಮಾಡುವುದೇ ಬಿಜೆಪಿಯ ಮುಖ್ಯ ಉದ್ದೇಶ. ಇಲ್ಲಿ ನಿಯಮಕ್ಕೆ ವಿರುದ್ಧವಾಗಿ ಹೋಗುವ ಯಾವುದೇ ನಾಯಕನಿಗೂ ಬಹಳ ದಿನ ಅವಕಾಶ ಇರಲ್ಲ. ಎಷ್ಟೋ ಮುಖ್ಯಮಂತ್ರಿ, ಮಂತ್ರಿಗಳನ್ನು ಒಂದೇ ಏಟಿಗೆ ಬದಲಾಯಿಸುವ ತಾಕತ್ತು, ಶಿಸ್ತು ಬಿಜೆಪಿ ಪಕ್ಷದಲ್ಲಿ ಇದೆ. ಸಂಘದ ಮೂಲ ಉದ್ದೇಶಗಳೇ ಇದರ ತಳಪಾಯ ಹಾಗೂ ದೇಶದ ಸಂಪೂರ್ಣ ಅಭಿವೃದ್ಧಿ. ಸಾಧನೆಯ ಮಟ್ಟ ತಲುಪದಿದ್ದರೆ ಪ್ರಧಾನಿಯನ್ನೂ ಬದಲಾಯಿಸುವ ಬಲಿಷ್ಠ ನಿಯಮಗಳು ಬಿಜೆಪಿಯಲ್ಲಿ ಇವೆ.

ಸುದ್ದಿ ಫೇಸ್‌ಬುಕ್ ಕೃಪೆಯಿಂದ : ಚಂದ್ರು ಎಸ್ ಮಾಡೇರ್.

 

 

ಜಿಲ್ಲೆ

ರಾಜ್ಯ

error: Content is protected !!