ಸುದ್ದಿ ಸದ್ದು ನ್ಯೂಸ್
ಲಕ್ನೋ: ಪಂಚರಾಜ್ಯಗಳ ಚುನಾವಣೆಯ ಬೆನ್ನಲ್ಲೇ ಉತ್ತರ ಪ್ರದೇಶ ಬಿಜೆಪಿ ಶಾಸಕರು ಸರಣಿ ರಾಜಿನಾಮೆ ನೀಡುತ್ತಿರುವ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ವಕ್ತಾರ ಐ ಪಿ ಸಿಂಗ್
ಬಿಜೆಪಿಯ ಸ್ವತಂತ್ರ ದೇವ್ ಅವರಿಗೆ ಈ ಬೀಗವನ್ನು ಕಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಐ ಪಿ ಸಿಂಗ್ ಓಂಪ್ರಕಾಶ್ ರಾಜ್‌ಭಾರ್, ಜಯಂತ್ ಚೌಧರ್, ರಾಜ್‌ಮಾತಾ ಕೃಷ್ಣ ಪಟೇಲ್, ಸಂಜಯ್ ಚೌಹಾನ್, ಹಾಗೂ ಸ್ವಾಮಿಪ್ರಸಾದ್ ಮೌರ್ಯ ಸೇರಿದಂತೆ ಹಲವರು ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದ ಜೊತೆ ಇದ್ದಾರೆ.
“ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಮಾರ್ಚ್ 10 ರಂದು ಫಲಿತಾಂಶ ಬರಲಿದೆ. ಆ ಹಿನ್ನೆಲೆಯಲ್ಲಿ ಮಾರ್ಚ್ 10 ರಂದು ಕಚೇರಿಗೆ ಬೀಗ ಹಾಕಿ ಮನೆಗೆ ಹೋಗಲು ಅವರಿಗೆ ಬೀಗವೊಂದನ್ನು ಕಳಿಸಿದ್ದೇನೆ. ಇದನ್ನು ಮಾರ್ಚ್ 10 ರಂದು ಬಳಸಿಕೊಳ್ಳಿ, ಬಳಿಕ ಮನೆಗೆ ಹೋಗಿ, ಇದು ಸಮಾಜವಾದಿಯ ಅಲೆ” ಎಂದು ಬರೆದಿದ್ದಾರೆ. ಉತ್ತರ ಪ್ರದೇಶದ ಹಿಂದುಳಿದ ನಾಯಕರು ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ದಲಿತರು, ರೈತರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು, ಬೆಲೆ ಏರಿಕೆ, ಜಾತಿ ರಾಜಕಾರಣ, ಮತ್ತು ನಿರುದ್ಯೋಗಿ ಯುವಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.