ಸುದ್ದಿ ಸದ್ದು ನ್ಯೂಸ್
ಧಾರವಾಡ: ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಬೈಲೂರು ಗ್ರಾಮದ ಮೇರು ಜಾನಪದ ಗಾರುಡಿಗ, ಜಾನಪದ ಗಾಯಕ, ನಟ, ರಂಗಕರ್ಮಿ ಬಸವಲಿಂಗಯ್ಯ ಹಿರೇಮಠ (63) ಅವರು ಈವತ್ತು ಬೆಳೆಗ್ಗೆ ವಿಧಿವಶರಾಗಿದ್ದು ಧಾರವಾಡ ನಗರದ ಸಪ್ತಾಪೂರ 7ನೇ ಅಡ್ಡ ರಸ್ತೆಯಲ್ಲಿ ಇರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಧಾರವಾಡದಲ್ಲಿ ವಾಸವಿದ್ದ ಅವರು ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಉತ್ತರ ಕರ್ನಾಟಕದ ಸಂಗ್ಯಾ ಬಾಳ್ಯಾ ಶ್ರೀ ಕೃಷ್ಣ ಪಾರಿಜಾತ ಮೊದಲಾದ ದೊಡ್ಡಾಟ ಸಣ್ಣಾಟಗಳನ್ನು ರಂಗಮಂಟಪಕ್ಕೆ ತರುವ ಮೂಲಕ ಜಾನಪದವನ್ನು ಜೀವಂತವಾಗಿರಿಸಿದ ಹಿರಿಯ ಕಲಾವಿದರು.
ಪೂಜ್ಯ ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಮಾಜಿ ಶಾಸಕರು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಚಂದ್ರಕಾಂತ ಬೆಲ್ಲದ ಹಾಗೂ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ರಂಗಾಸಕ್ತರು ಭಾಗಿಯಾಗಿ ಅಂತಿಮ ದರ್ಶನ ಪಡೆದು ಶೃದ್ದಾಂಜಲಿ ಸಭೆಯಲ್ಲಿ ಭಾವಪೂರ್ಣ ನುಡಿಗಳನ್ನಾಡಿದರು.