Thursday, September 19, 2024

ಕಿತ್ತೂರು ಪಟ್ಟಣ ಪಂಚಾಯತಗೆ 18 ರ ಪೈಕಿ 9 ಬಿಜೆಪಿ, 5 ಕಾಂಗ್ರೇಸ್‌, 4 ಪಕ್ಷೇತರರು ಆಯ್ಕೆ

ಸುದ್ದಿ ಸದ್ದು ನ್ಯೂಸ್‌

ಚನ್ನಮ್ಮನ ಕಿತ್ತೂರು: ಕಳೆದ ಡಿಸೆಂಬರ್‌ 27 ರಂದು ನಡೆದ ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆಯ  ಪಲಿತಾಂಶ ಇಂದು ಪ್ರಕಟವಾಗಿದ್ದು ಭಾರತೀಯ ಜನತಾ ಪಕ್ಷ 9, ಕಾಂಗ್ರೇಸ್‌5 ಹಾಗೂ 4 ಜನ ಪಕ್ಷೇತರರು ಗೆಲ್ಲುವ ಮುಖಾಂತರ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ ಪಟ್ಟಣ ಪಂಚಾಯತ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಶ್ವಿಯಾಗಿದೆ.

ಕಿತ್ತೂರು ಪಟ್ಟಣ ಪಂಚಾಯತ ವಾರ್ಡ ನಂಬರ್‌ 1 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ಶಿವಲಿಂಗಪ್ಪ ಕಡೇಮನಿ ಅವರನ್ನು 145 ಮತಗಳ ಅಂತರದಿಂದ ಸೋಲಿಸಿ ಹಾಗೂ ಪಕ್ಷೇತರ ಅಭ್ಯರ್ಥಿ ಜೈಸಿದ್ದರಾಮ ಮಾರಿಹಾಳ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 2 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಯಲ್ಲಪ್ಪ ಕಡಕೋಳ   ಅವರನ್ನು 262 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ನಾಗರಾಜ ಅಸುಂಡಿ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 3 ರಲ್ಲಿ ಮೂರು ಜನ ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಶಾಹೀನಬಾನು ತಿಗಡೊಳ್ಳಿ ಹಾಗೂ ಬಿಜೆಪಿಯ ಶರೀಪಾಬಿ ಬಸ್ಸಾಪೂರ ಅವರನ್ನು    254 ಮತಗಳ ಅಂತರದಿಂದ ಸೋಲಿಸಿ ಪಕ್ಷೇತರ ಅಭ್ಯರ್ಥಿ ತಸ್ಲೀಮಬಾನು ಸುತಗಟ್ಟಿ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 4 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಸೂರ್ಯಕಾಂತ ಕಿತ್ತೂರು  ಅವರನ್ನು 176 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಪ್ರಮೋದ ಕಾಜಗಾರ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 5 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ಮಲ್ಲೇಶೆಪ್ಪ ಶಿರೋಮಣಿ ಅವರನ್ನು 109 ಮತಗಳ ಅಂತರದಿಂದ ಕಾಂಗ್ರೇಸ್ಸಿನ ಶಂಕರ ಬಡಿಗೇರ ಅವರು  ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 5 ರಲ್ಲಿ ಗೆಲವು ಸಾದಿಸಿದ ಕಾಂಗ್ರೇಸ್ಸಿನ ಶಂಕರ ಬಡಿಗೇರ

ವಾರ್ಡ ನಂಬರ್‌ 6 ರಲ್ಲಿ ಇಬ್ಬರು ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ವರ್ಜಾವತಿ ಭೀಮರಡ್ಡಿ ಅವರನ್ನು164 ಮತಗಳ ಅಂತರದಿಂದ ಸೋಲಿಸಿ ಕಾಂಗ್ರೇಸ್ಸಿನ ಶಾರದಾ ಜಕ್ಕನಗೌಡ್ರ  ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 7 ರಲ್ಲಿ ನಾಲ್ಕು ಜನ ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಈರಣ್ಣ ಮಾರಿಹಾಳ, ಪಕ್ಷೇತರ ಅಭ್ಯರ್ಥಿಕಿರಣ ವಾಳದ ಮತ್ತು ಪ್ರಕಾಶ ಜಾಂಗಟಿ ಅವರುಗಳನ್ನು  162 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಮಂಜುನಾಥ ತೊಟ್ಟಲಮನಿ  ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 8 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಈರಪ್ಪ ಕಲ್ಲವಡ್ಡರ  ಅವರನ್ನು 391 ಮತಗಳ ಅಂತರದಿಂದ ಸೋಲಿಸಿ ಬಿಜೆಪಿ ಅಭ್ಯರ್ಥಿ ರಾಜು ಕಲ್ಲವಡ್ಡರ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 9 ರಲ್ಲಿ ಮೂರು ಜನ ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಬಸವರಾಜ ಮಂಗಳಗಟ್ಟಿ ಹಾಗೂ ಬಿಜೆಪಿಯ ನಾಗರಾಜ ಸೊಂಟಕ್ಕಿ ಅವರನ್ನು   125 ಮತಗಳ ಅಂತರದಿಂದ ಸೋಲಿಸಿ ಪಕ್ಷೇತರ ಅಭ್ಯರ್ಥಿ ಮುಗಟಸಾಬ ಜಕಾತಿ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 10 ರಲ್ಲಿ ಮೂರು ಜನ ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಯಾಸ್ಮೀನ ದಾಸ್ತಿಕೊಪ್ಪ ಹಾಗೂ ಬಿಜೆಪಿಯ ರಶಿದಾ ಬೇಪಾರಿ ಅವರನ್ನು   268 ಮತಗಳ ಅಂತರದಿಂದ ಸೋಲಿಸಿ ಪಕ್ಷೇತರ ಅಭ್ಯರ್ಥಿ ಸಮರೀನಬಾನು ಸುತಗಟ್ಟಿ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 11 ರಲ್ಲಿ ಇಬ್ಬರು ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು  ಕಾಂಗ್ರೇಸ್‌ ಅಭ್ಯರ್ಥಿ ಶೋಭಾ ಕಕ್ಕೇರಿ ಅವರನ್ನು107 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಅನುರಾಧಾ ಬಡಿಗೇರ  ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 12 ರಲ್ಲಿ ಮೂರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ಮಂಜುನಾಥ ಮುರಗೋಡ ಹಾಗೂ  ಪಕ್ಷೇತರ ಅಭ್ಯರ್ಥಿ ಫಕ್ಕೀರಪ್ಪ ಗುಂಜಿ ಅವರುಗಳನ್ನು  170 ಮತಗಳ ಅಂತರದಿಂದ ಸೋಲಿಸಿ ಕಾಂಗ್ರೇಸ್‌ ಅಭ್ಯರ್ಥಿಕೃಷ್ಣಾ ಬಾಳೇಕುಂದರಗಿ ಗೆಲವು ಸಾದಿಸಿದ್ದಾರೆ.

ವಾರ್ಡ ನಂಬರ್‌ 12 ರಲ್ಲಿ ಗೆಲವು ಸಾದಿಸಿದ ಕಾಂಗ್ರೇಸ್ಸಿನ ಕೃಷ್ಣಾ ಬಾಳೇಂಕುದರಗಿ

ವಾರ್ಡ ನಂಬರ್‌ 13 ರಲ್ಲಿ ಇಬ್ಬರು ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ರುಕ್ಮೀಣಿ ಬಡಿಗೇರ ಅವರನ್ನು215 ಮತಗಳ ಅಂತರದಿಂದ ಸೋಲಿಸಿ ಕಾಂಗ್ರೇಸ್ಸಿನ ಆಷ್ಮಾ ನದೀಮುಲ್ಲಾ ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 14 ರಲ್ಲಿ ಇಬ್ಬರು ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು ಬಿಜೆಪಿ ಅಭ್ಯರ್ಥಿ ಶೋಭಾ ಚವ್ಹಾಣ ಅವರನ್ನು86 ಮತಗಳ ಅಂತರದಿಂದ ಸೋಲಿಸಿ ಕಾಂಗ್ರೇಸ್ಸಿನ ಶಶಿಕಲಾ ಗಂಗಪ್ಪನವರ ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 15 ರಲ್ಲಿ ಮೂರು ಜನ ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಉಮೇಶ ಹೊಂಗಲ ಮತ್ತು ಪಕ್ಷೇತರ ಅಭ್ಯರ್ಥಿ ನಿಂಗಪ್ಪ ಶಿವನಗುಡಿ ಅವರುಗಳನ್ನು  14 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಕಿರಣ ಪಾಟೀಲ  ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 16 ರಲ್ಲಿ ಮೂರು ಜನ ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಶಿವಲೀಲಾ ಗದಗಿಮಠ ಹಾಗೂ ಜೆಡಿಎಸ್‌ ಅಭ್ಯರ್ಥಿ ಸುವರ್ಣಾ ಆನೆಮಠ  ಬೇಪಾರಿ ಅವರನ್ನು   270 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಲಕ್ಷ್ಮೀ ಬಡಿಗೇರ ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 17 ರಲ್ಲಿ ಇಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಅಶ್ಪಾಕ ಹವಾಲ್ದಾರ  ಅವರನ್ನು   139 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ  ದೌಲತ್‌ ಪರಂಡೇಕರ ಗೆಲವು ಸಾದಿಸಿದ್ದಾರೆ.

 

ವಾರ್ಡ ನಂಬರ್‌ 18 ರಲ್ಲಿ ಇಬ್ಬರು ಅಭ್ಯರ್ಥಿ ಚುನಾವಣಾ ಕಣಕ್ಕೆ ಇಳಿದಿದ್ದರು ಕಾಂಗ್ರೇಸ್‌ ಅಭ್ಯರ್ಥಿ ಉಮೇಶ ಶೆಟ್ಟರ  ಅವರನ್ನ  57 ಮತಗಳ ಅಂತರದಿಂದ ಸೋಲಿಸಿ ಬಿಜೆಪಿಯ ಸಂಗಪ್ಪ (ಪಾಪು) ನರಗುಂದ ಗೆಲವು ಸಾದಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಜಿಲ್ಲೆ

ರಾಜ್ಯ

error: Content is protected !!