ಬೆಂಗಳೂರು: ಮೈಸೂರು ಪ್ರಾಂತ್ಯದ ಲಿಂಗಾಯತಗೌಡರನ್ನು ಪಂಚಮಸಾಲಿಗಳೊಂದಿಗೆ 2 ಎ ಸೇರಿಸುವಂತೆ ಸಮರ್ಥವಾಗಿ ಆಯೋಗ ಮುಂದೆ ವಾದ ಮಂಡಿಸಿದ.ಅಖಿಲ ಭಾರತ ಲಿಂಗಾಯತ ಪಂಚಮಸಾಲಿಗೌಡ ಮಹಾಸಭಾದ ಕಾನೂನು ಘಟಕದ ರಾಷ್ಟ್ರೀಯ ಅಧ್ಯಕ್ಷ ವಕೀಲ ದಿನೇಶ ಪಾಟೀಲ್.
ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯ ಪ್ರಕಾಶ ಹೆಗ್ಗಡೆಯವರು ಕರೆದಿದ್ದ ವಿಚಾರಣೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಹಾಗೂ ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ ಸಾನಿಧ್ಯದಲ್ಲಿ, ಹಾಜರಿದ್ದ ಲಿಂಗಾಯತ ಗೌಡ ಮಹಾಸಭಾದ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿ ಅಲನಹಳ್ಳಿ , ಪಂಚಮಸಾಲಿ ಗೌಡ ಲಿಂಗಾಯತ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ ನಿಯೋಗವು ಇಂದು ಹಿಂದುಳಿದ ಆಯೋಗದ ಮುಂದೆ ಗೌಡ ಲಿಂಗಾಯತ ನಿಯೋಗದ ಪರವಾಗಿ ಕಾನೂನು ಘಟಕದ ಅಧ್ಯಕ್ಷ ದಿನೇಶ್ ಪಾಟೀಲ್ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ, ಮಲೆನಾಡಿನಲ್ಲಿ ಮಲೆಗೌಡ ಹಾಗೂ ಮೈಸೂರು ಪ್ರಾಂತ್ಯದ 14 ಜಿಲ್ಲೆಗಳಲ್ಲಿ ಲಿಂಗಾಯತ ಗೌಡ ಎಂದು ಕರೆಯಲ್ಪಡುವ ಸಮಾಜಗಳನ್ನು ಲಿಂಗಾಯತ ಪಂಚಮಸಾಲಿಗಳ ಪರ್ಯಾಯ ನಾಮಗಳೆಂದು ಗುರುತಿಸಿ 2 ಎ ಮೀಸಲಾತಿ ನೀಡುವಂತೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೈಸೂರ ಗೆಜೆಟ್, ಪಂಚಮಸಾಲಿ ದಾಖಲೆಗಳು ಹಾಗೂ ಸಂಶೋಧಕ ಎಂಎಂ ಕಲಬುರ್ಗಿ ಪುಸ್ತಕಗಳ ಆಧಾರ ಮೇಲೆ ಸಮರ್ಥನೆ ನೀಡಿದರು.ಇತಿಹಾಸದಲ್ಲಿ ಮೊದಲ ಬಾರಿಗೆ ಲಿಂಗಾಯತ ಗೌಡ ಸಮಾಜಕ್ಕೆ ಮೀಸಲಾತಿಯ ವಿಚಾರಣೆಯ ನಡೆದಿರುವುದು ಸಂತಸವಾಗಿದೆ.
ಈಗಾಗಲೇ ಲಿಂಗಾಯತ ಪಂಚಮಸಾಲಿಗಳು 3 ಬಿ ಹಿಂದುಳಿದ ವರ್ಗದಲ್ಲಿ ಇರುವುದರಿಂದ 2 ಎ ಮೀಸಲಾತಿಗಾಗಿ ಹಳೆ ಮೈಸೂರು ಭಾಗದಲ್ಲಿ 14 ಜಿಲ್ಲೆಗಳಲ್ಲಿ ಆಗಸ್ಟ್ 26 ರಿಂದ ಜರುಗಿದ ಪ್ರತಿಜ್ಞಾ ಪಂಚಾಯತ್ ಅಭಿಯಾನದ ಮೂಲಕ ಲಿಂಗಾಯತ ಗೌಡರ ಹಾಗೂ ಪಂಚಮಸಾಲಿಗಳ ಜೀವನ , ಧಾರ್ಮಿಕ ಹಾಗೂ ಕೃಷಿ ಪದ್ದತಿಗಳು ಒಂದೇ ತೆರನಾಗಿ ಇರುವುದರಿಂದ ಪರ್ಯಾಯ ನಾಮಗಳ ಆಧಾರದ ಮೇಲೆ ನಮ್ಮೊಂದಿಗೆ ಅವರಿಗೂ ನ್ಯಾಯ ಒದಗಿಸಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.
ವಾದವನ್ನು ಆಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಯವರು ಚಾಮರಾಜನಗರ ಮೈಸೂರು ಹಾಗೂ ಕೆಲವು ಜಿಲ್ಲೆಗಳಲ್ಲಿ ಸರ್ವೆ ಮಾಡಿ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದರು.
ಲಿಂಗಾಯತ ಗೌಡ ಮಹಾಸಭಾದ ನಿಯೋಗದಲ್ಲಿ ಮಾಜಿ ಮೇಯರ್ ಪುಟ್ಟರಾಜ,ರಾಜ್ಯ ಮುಖಂಡ ನಟರಾಜ,ಕಾರ್ಯದರ್ಶಿ ಮಹೇಶ್ , ಪ್ರಧಾನ ಕಾರ್ಯದರ್ಶಿ ಜಗದೀಶ , ಚಾಮರಾಜನಗರದ ಯುವ ಅಧ್ಯಕ್ಷ ಶಂಭು ಪಾಟೇಲ್, ಪಂಚಸೇನಾ ರಾಜ್ಯ ಅಧ್ಯಕ್ಷ ಡಾ.ಬಿ ಎಸ್.ಪಾಟೀಲ್ ನಾಗಾರಾಲ್ ಹುಲಿ , ಕೊಡಗು ಜಿಲ್ಲಾ ಅಧ್ಯಕ್ಷ ಮೋಹನ್ , ಮೈಸೂರು ಜಿಲ್ಲಾ ಅಧ್ಯಕ್ಷ ಕೋಣ್ಣನೂರ್ ಜಗದೀಶ್ , ಬೆಂಗಳೂರು ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮೇಟಿ , ನಗರ ಅಧ್ಯಕ್ಷ ಮಲ್ಲೇವಾಡಿ ಶಿವಪುತ್ರ , ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.