Friday, September 20, 2024

ಮಹಿಳಾ ಸಬಲೀಕರಣಕ್ಕಾಗಿ ಪ್ರೋತ್ಸಾಹ ನೀಡಬೇಕು:ಸತೀಶ್ ಜಾರಕಿಹೊಳಿ

ಗೋಕಾಕ : ಮಹಿಳೆಯರಿಗೆ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯದ ಪೂರಕವಾಗಿ ಭಾರತೀಯ ಜೈನ್ ಸಂಘಟನೆ ತರಬೇತಿ ನೀಡುತ್ತಿದ್ದು, ಇಂತಹ ಕಾರ್ಯಾಗಾರಗಳನ್ನು ಹೆಚ್ಚು ನಡೆಸುವುದರ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಪ್ರೋತ್ಸಾಹ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಗೋಕಾಕ ಡಾಲರ್ಸ್ ಕಾಲೋನಿಯ ಕ್ಲಬ್ ಹೌಸ್ ಸಭಾ ಭವನದಲ್ಲಿ ಭಾರತೀಯ ಜೈನ್ ಸಂಘಟನಾ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಮಾರ್ಟ್ ಗರ್ಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಹಿಳೆಯರು ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಕೂಡಲೇ ಸ್ಪಂಧಿಸಬೇಕು. ಎಲ್ಲ ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಭಾರತದಲ್ಲಿ ಮೊದಲು ಮಹಿಳೆಯರಿಗೆ ಸ್ಥಾನಮಾನಗಳು ಇರಲಿಲ್ಲ. ಬಸವಣ್ಣನವರ ಹೋರಾಟದ ಬಳಿಕ ಸ್ಥಾನಮಾನಗಳು ದೊರೆತವು. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ನಂತರ ಮಹಿಳೆಯರಿಗೆ ಶಿಕ್ಷಣ ಕಲಿಯುವ ಅವಕಾಶ ದೊರೆಯಿತು. ಮಹಾನ್ ನಾಯಕರ ಹೋರಾಟದ ಪ್ರತಿಫಲವಾಗಿ ಮಹಿಳೆಯರು ಸ್ವತಂತ್ರವಾಗಿ ಶಿಕ್ಷಣ ಪಡೆಯುವಂತಾಗಿದೆ ಎಂದು ಹೇಳಿದರು.

ಸಂವಿಧಾನದಿಂದ ಮಹಿಳೆಯರಿಗೆ ರಾಜಕೀಯವಾಗಿ ಶೇ.50ರಷ್ಟು ಮೀಸಲಾತಿ ಇದೆ. ಹೆಚ್ಚು ಹೆಚ್ಚು ರಾಜಕೀಯವಾಗಿ ಬೆಳೆದು ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಬೇಕು. ಪ್ರತಿಯೊಂದು ರಂಗದಲ್ಲಿಯೂ ಮಹಿಳೆಯರು ತಮ್ಮದೇಯಾದ ಸ್ಥಾನಮಾನಗಳನ್ನು ಪಡೆಯಬೇಕು ಎಂದರು.

ಇಡೀ ಜಗತ್ತಿನ ಅನೇಕ ವಿಷಯಗಳ ಕುರಿತು ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು. ಆದರೆ ಅದರ ಸದ್ಬಳಕೆಗಿಂತ ದುರ್ಬಳಕೆ ಹೆಚ್ಚಾಗಿದೆ. ಮೊಬೈಲ್ ಒಳ್ಳೆಯದಕ್ಕಿಂತ ಕೆಟ್ಟದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಮೊಬೈಲ್ ಅನ್ನು ಶಿಕ್ಷಣಕ್ಕೆ ಅನುಕೂಲವಾಗುವ ರೀತಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪೋಷಕರು ಮಹಿಳೆರಿಗೆ ಶಿಕ್ಷಣ ನೀಡುವಾಗ ಸ್ವಾತಂತ್ರ್ಯ ನೀಡುತ್ತಾರೆ. ಆದರೇ ಮದುವೆ ವಿಷಯದಲ್ಲಿ ಅವರಿಗೆ ಉತ್ತಮ ತಮ್ಮ ಬದುಕಿನ ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಸ್ವಾತಂತ್ರ್ಯ ನೀಡುವುದಿಲ್ಲ. ಹಾಗಾಗಿ ಅವರನ್ನು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಾಗ ಮಾತ್ರ ಅವರು ತಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರತಿಪಾಧಿಸಿದರು.

ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಲಾಗಿತು. ಉಪನ್ಯಾಸಕರಾಗಿ ಆನೇಕಾಂತ್ ಶಾಸ್ತ್ರಿ ಮೀತುನ್ ಶಾಸ್ತ್ರಿ ಆಗಮಿಸಿದ್ದರು. ಜಿಲ್ಲಾ ಕೋ-ಆರಡಿನೇಟ್ ರಾಜು ದರಗಶೆಟ್ಟಿ, ತಾಲ್ಲೂಕು ಅಧ್ಯಕ್ಷ ಸಂತೋಷ ಹುಂಡೇಕರ, ಕಾರ್ಯದರ್ಶಿ ಪ್ರವೀಣ ಕಮಲಾಪುರೆ, ಮಹಿಳಾ ಮಂಡಳ ಅಧ್ಯಕ್ಷ ಭಾಗೀರಥಿ ನಂದಗಾವಿ, ಸೇರಿದಂತೆ ಇತರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!