ಮೊಟ್ಟೆ ವಿತರಣೆ ಕೈಬಿಡದಿರಲು ಒತ್ತಾಯಿಸಿ ಪ್ರತಿಭಟನೆ

ಉಮೇಶ ಗೌರಿ (ಯರಡಾಲ)

ಹುಬ್ಬಳ್ಳಿ: ಯಾವುದೇ ಬೆದರಿಕೆಯ ಒತ್ತಡಕ್ಕೆ ಮಣಿಯದೇ ಅಪೌಷ್ಟಿಕತೆ ನಿರ್ಮೂಲನೆಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಮೊಟ್ಟೆ ಯೋಜನೆಯನ್ನು ವಾರಪೂರ್ತಿ ವಿಸ್ತರಿಸಿ ವಿತರಿಸುವಂತೆ ಆಗ್ರಹಿಸಿ ನಗರದ ತಹಶಿಲ್ದಾರ ಕಛೇರಿ ಬಳಿ ಸಮತಾ ಸೇನಾ ರಾಜ್ಯಾಧ್ಯಕ್ಷ ಹಾಗೂ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು, ವಿದ್ಯಾರ್ಥಿಗಳ ಪೌಷ್ಟಿಕತೆ ದೃಷ್ಟಿಯಿಂದಾಗಿ ಸರ್ಕಾರದ ಮೊಟ್ಟೆ ವಿತರಿಸುವ ಯೋಜನೆಯನ್ನು ಕೆಲ ಸ್ವಾಮೀಜಿಗಳು ವಿರೋಧಿಸಿದ್ದು ಯಾರಿಗೂ ಮಣಿಯದೇ ವಿತರಣೆಯನ್ನು ಮುಂದುವರೆಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುರುನಾಥ ಉಳ್ಳಿಕಾಶಿ ಅವರು ಮೊಟ್ಟೆ ಬೇಡ ಎನ್ನುವರಿಗೆ ಬಾಳೆ ಹಣ್ಣು ಅಥವಾ ಇತರೆ ಯಾವುದೇ ಪೌಷ್ಟಿಕ ಆಹಾರ ನೀಡಿ. ಆದರೇ ಮೊಟ್ಟೆ ಸೇವಿಸುವವರಿಗೆ ಮೊಟ್ಟೆ ಅಗತ್ಯವಾಗಿ ನೀಡಿ ಎಂದು ಆಗ್ರಹಿಸಿದ ಅವರು, ಮುಂದಿನ ದಿನಗಳಲ್ಲಿ ಮೊಟ್ಟೆ ವಿತರಣೆ ಕೈ ಬಿಟ್ಟಿದ್ದೆ ಆದರೆ ರಾಜ್ಯಾದ್ಯಂತ ಹೊರಾಟ ಮಾಡಲಾಗುವುದು ಎಂದು ಎಚರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ, ರೇವಣಸಿದ್ದಪ್ಪ ಹೊಸಮನಿ, ಮಲ್ಲಾಶೇಟ್, ಕಿರಣ ಗಾಮನಗಟ್ಟಿ, ಫಕ್ಕಣ್ಣ ದೊಡ್ಡಮನಿ, ಶ್ರೀನಿವಾಸ ತೇರದಾಳ, ಲೋಹಿತ್ ಗಾಮನಗಟ್ಟಿ, ಮಹೇಶ ಧಾಬಡೆ, ದೇವೇಂದ್ರಪ್ಪ ಇಟಗಿ, ರೈಸ್ ಖೌಝಿ, ಶಕೀಲ್ ಅಹ್ಮದ್ ಸೇರಿದಂತೆ ಉಪಸ್ಥಿತರಿದ್ದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";