ಬೆಳಗಾವಿ:ಪ್ರಭಾವಿ ರಾಜಕಾರಣಿಗಳಾದ ಜಾರಕಿಹೊಳಿ ಸಹೋದರರ ಅಣ್ಣತಮ್ಮಂದಿರ ನಡುವಿನ ಸವಾಲಿನಿಂದಾಗಿ ಬೆಳಗಾವಿ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಗಳಿಗೆ ಡಿ.10 ರಂದು ನಡೆಯಲಿರುವ ಚುನಾವಣೆಯು ರಾಜ್ಯದ ಗಮನಸೆಳೆದಿದೆ.
ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೇಸ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಟ್ಟಿದೆ. ಆಮ್ ಆದ್ಮಿ ಪಕ್ಷದಿಂದ ಶೇಖರ ಹೆಗಡೆ ಸ್ಪರ್ಧಿಸಿದ್ದಾರ. ಗೋಕಾಕದ ಉದ್ಯಮಿ ಜಾರಕಿಹೊಳಿ ಮನೆತನದ ಲಖನ್ ಜಾರಕಿಹೊಳಿ, ಜೊತೆಗೆ ಶಂಕರ ಕುಡಸೋಮಣ್ಣವರ ಮತ್ತು ಕಲ್ಮೇಶ ಗಾಣಗಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಇದ್ದಾರೆ.ಆದರೂ ಬಿಜೆಪಿ-ಕಾಂಗ್ರೇಸ ಮತ್ತು ಪಕ್ಷೇತರ ಲಖನ ಜಾರಕಿಹೊಳಿ ನಡುವೆ ತ್ರಿಕೋನ ಹಣಾಹಣಿ ಕಂಡುಬರುತ್ತಿದ್ದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಒಬ್ಬೊಬ್ಬರ ಕಣಕ್ಕಿಳಿಯುವುದರಿಂದ ಸಮ ಪಾಲು ಖಚಿತ ಎಂಬ ಯೋಚನೆಯಲ್ಲಿದ್ದ ಎರಡು ಪಕ್ಷದವರಿಗೆ ಲಖನ ಕೊಳ್ಳಿ ಇಟ್ಟಿದ್ದಾರೆ.
ಕಣ ಹಿಂದೆಂದಿಗಿಂತಲೂ ರಂಗೇರಿದೆ. ಹಣ, ಚಿನ್ನದುಂಗುರ, ಅಡುಗೆ ಒಲೆ, ಇಸ್ತರಿ ಪೆಟ್ಟಿಗೆ,ಮೊದಲಾದವುಗಳ ಆಮೀಷ ಹಂಚಿಕೆಯ ಮಾತುಗಳು ಕೇಳಿಬರುತ್ತಿವೆ.
ಈ ಚುನಾವಣೆ ರಮೇಶ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳಕರ ನಡುವಿನ ಹಣಾಹಣೆ ಎಂದೂ ಬಿಂಬಿತವಾಗುತ್ತಿದೆ.ಇನ್ನೂಂದೆಡೆ ತಮ್ಮ ಭವಿಷ ಭದ್ರಪಡಿಸಿಕೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭ್ಯರ್ಥಿ ಚನ್ನರಾಜ ಪರ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ.ಸ್ವತಃ ಏಜೆಂಟ ಆಗಲೂ ಮುಂದಾಗಿದ್ದಾರೆ!
13 ಶಾಸಕರು ಮತ್ತು 3 ಸಂಸದರ ಬಲ ಬಿಜೆಪಿಗಿದೆ.ಕಾಂಗ್ರೆಸ್ ಶಾಸಕರಿರುವುದು ಐವರು ಮಾತ್ರ. ಗ್ರಾ.ಪಂ.ಚುನಾವಣೆಯಲ್ಲಿ ನಮ್ಮ ಬೆಂಬಲಿತರು ಹೆಚ್ಚು ಗೆದ್ದಿದ್ದಾರೆ ಎಂದು ಬಿಜೆಪಿಯವರು ಹೇಳಿಕೊಂಡಿದ್ದರು.ಈ ಸಂಖ್ಯೆಯು ಆ ಪಕ್ಷದ ಬಲ ಹೆಚ್ಚಿಸಿದೆ,ಲಖನ ಸ್ಪರ್ಧಯಿಂದಾಗಿ ಮತ ವಿಭಜನೆ ಭೀತಿಯೂ ಅವರಿಗಿದೆ.
ಪ್ರಥಮ ಪ್ರಾಶಸ್ತ್ಯದ ಗೆಲ್ಲಬಹುದಾದಷ್ಟು ಮತಗಳು ನಮ್ಮೊಂದಿಗಿವೆ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ ನಾಯಕರು ಅವರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆದ್ದಿದ್ದ ನಿದರ್ಶನವೂ ಕ್ಷೇತ್ರದ್ದಾಗಿದೆ.ಈ ಬಾರಿಯ ಚಿತ್ರಣವು ಬಿಜೆಪಿ-ಕಾಂಗ್ರೆಸ್ ಜಗಳದಲ್ಲಿ 3ನೇಯವರಿಗೆ ಲಾಭವಾಗುವ ಸಾಧ್ಯತೆಯ ಚರ್ಚೆಗೂ ಗ್ರಾಸವಾಗಿದೆ.
ಮತದಾರರು ಎಲ್ಲ ಪ್ರಚಾರ ಸಭೆಯಲ್ಲೂ ಕಾಣಿಸಿಕೊಂಡಿದ್ದಾರೆ.,ಮತದಾನದ ಮುನ್ನಾ ದಿನ ಜಾರಕಿಹೊಳಿ ಸಹೋದರರು ಬೆಂಬಲಿಗರಿಗೆ ನೀಡುವ ಸಂದೇಶದ ಮೇಲೆ ಚಿತ್ರಣ ನಿರ್ಧಾರವಾಗಲಿದೆ. ಯಾರಿಗೆ ಬೇಕಾದರೂ ಒಳಏಟು ಬೀಳಬಹುದು ಎಂಬ ಮಾತುಗಳಿವೆ.