ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್

ಉಮೇಶ ಗೌರಿ (ಯರಡಾಲ)

ಮುಂಬಯಿ: ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಜಾಕ್ವೆಲಿನ್​ ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸುಕೇಶ್​ ಹಾಗೂ ಈ ನಟಿಯ ಕಿಸ್ಸಿಂಗ್​ ಫೋಟೋಗಳು ಲೀಕ್​ ಆಗಿವೆ. ಇದರಿಂದ ಈ ಪ್ರಕರಣ ಮತ್ತಷ್ಟು ಬಿಗಿಯಾಗಿದೆ.

ಜಾಕ್ವೆಲಿನ್​ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ (ಇಡಿ) ನಿರ್ಧರಿಸಿದೆ. ಈ ಕಾರಣಕ್ಕೆ ಅವರು ಈಗ ವಿದೇಶಕ್ಕೆ ತೆರಳುವಂತಿಲ್ಲ. ಡಿಸೆಂಬರ್​ 10ಕ್ಕೆ ರಿಯಾದ್​ನಲ್ಲಿ Da-bangg ಕಾರ್ಯಕ್ರಮ ಇದೆ. ಇದಕ್ಕೆ ಸಲ್ಮಾನ್​ ಖಾನ್​ ಹಾಗೂ ಜಾಕ್ವೆಲಿನ್​ ಒಟ್ಟಾಗಿ ತೆರಳಬೇಕಿತ್ತು. ಆದರೆ, ಜಾಕ್ವೆಲಿನ್​ ಮಾಡಿಕೊಂಡ ಎಡವಟ್ಟಿನಿಂದ ಅವರಿಗೆ ವಿದೇಶಕ್ಕೆ ತೆರಳೋಕೆ ಆಗುತ್ತಿಲ್ಲ. ಹೀಗಾಗಿ, ಅವರನ್ನು ದೂರ ಇಡಲು ಸಲ್ಲು ನಿರ್ಧರಿಸಿದ್ದಾರೆ. ಈ ಮಧ್ಯೆ ಜಾಕ್ವೆಲಿನ್​ ಇಂದು (ಡಿಸೆಂಬರ್​ 5) ದುಬೈಗೆ ಹಾರುವ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದಾರೆ.

Da-bangg ಕಾರ್ಯಕ್ರಮಕ್ಕೆ ಎಂಟ್ರಿ ಪಡೆಯೋಕೆ ಅಭಿಮಾನಿಗಳು ಟಿಕೆಟ್​ ಪಡೆಯಬೇಕು. ಈ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಹಾಗೂ ಮತ್ತಿತರರು ಡ್ಯಾನ್ಸ್​ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಡಿಸೆಂಬರ್​ 10ರಂದು ರಿಯಾದ್​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ರೊಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿದೆ. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಅಕ್ಟೋಬರ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ ಫರ್ನಾಂಡಿಸ್​​ಗೆ ಸಮನ್ಸ್ ನೀಡಲಾಗಿತ್ತು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";