ಸಚಿವ ಮುರುಗೇಶ ನಿರಾಣಿಗೆ ಗೌರವ ಡಾಕ್ಟರೇಟ್

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಮುಧೋಳ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರಿಗೆ ಮಹಾರಾಷ್ಟ್ರ ರಾಜ್ಯದ ಕರಾಡ ಕೃಷ್ಣ ಮೆಡಿಕಲ್ ಸೈನ್ಸ್ ಡಿಮ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ.

ಮುರುಗೇಶ್ ನಿರಾಣಿ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಾಡಿದ ಕೈಗಾರಿಕಾ ಅಭಿವೃದ್ಧಿ. ಆರೋಗ್ಯ ಸೇವೆ. ಸಾಮಾಜಿಕ ಕಾರ್ಯ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ದ ಕುಲಪತಿ ಡಾ|| ನೀಲಮ್ಮ ಮಿಶ್ರಾ ತಿಳಿಸಿದ್ದಾರೆ.

ಇದೇ ದಿನಾಂಕ 05 ರಂದು ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುವ ವಿಶೇಷ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ|| ಸುರೇಶ ಭೋಸಲೆ ಉಪಸ್ಥಿತ ಇರುವರೆಂದು ಕುಲಪತಿ ಡಾ|| ನೀಲಮ್ಮ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರುಗೇಶ್ ನಿರಾಣಿ ಅವರಿಗೆ ಮಹಾರಾಷ್ಟ್ರ ಕರಾಡ ಕೃಷ್ಣ ಮೆಡಿಕಲ್ ಸೈನ್ಸ್ ಡಿಮ್ ವಿಶ್ವವಿದ್ಯಾಲಯ ಗೌರವ ಮಹಾರಾಷ್ಟ್ರದ ಪ್ರತಿಷ್ಠಿತ ಡಿಮ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಾಸಕರು ಸಚಿವರು ಅಭಿನಂದಿಸಿದ್ದಾರೆ.

 

Share This Article
";