ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಜಗಜಂಪಿ ಉದ್ಯೋಗ ಸಮೂಹದ ಮುಖ್ಯಸ್ಥರು ಖ್ಯಾತ ಉದ್ಯಮಿಗಳಾದ ಮಲ್ಲಿಕಾರ್ಜುನ ಜಗಜಂಪಿ ಅವರ ಪುತ್ರಿ ನಿವೇದಿತಾ ಅವರ ಜನ್ಮದಿನದ ನಿಮಿತ್ತ ಜಗಜಂಪಿ ಬಜಾಜ್ ಅವರಿಂದ ನವೆಂಬರ 28 ರಿಂದ ಡಿಸೆಂಬರ್ 5 ರವರೆಗೆ ಬಜಾಜ್ ವಾಹನಗಳ ಖರೀದಿ ಮೇಲೆ 5 ಸಾವಿರ ರೂ. ರಿಯಾಯಿತಿ (Discount) ಘೋಷಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರು, ವರದಿಗಾರರು ಹಾಗೂ ಇತರೆ ಕಾರ್ಮಿಕ ವರ್ಗದ ಜನರಿಗೆ ಜಗಜಂಪಿ ಬಜಾಜ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ವಾಹನ ಖರೀದಿಸುವುದಕ್ಕೆ ಸಾಲದ ಅವಕಾಶ ಕಲ್ಪಿಸುತ್ತ ಬಂದಿದ್ದೇವೆ.
ಈಗ ಪುತ್ರಿ ನಿವೇದಿತಾಳ ನನ್ನ ಜನ್ಮದಿನದ ಪ್ರಯುಕ್ತ ಬಜಾಜ್ ವಾಹನ ಖರೀದಿ ಮೇಲೆ ರೂಂ 5 ಸಾವಿರ ರಿಯಾಯಿತಿ (Discount) ಇಟ್ಟಿದ್ದೇವೆ. ಕಾರಣ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮುಖ್ಯಸ್ಥರಾದ ಮಲ್ಲಿಕಾರ್ಜುನ ಜಗಜಂಪಿ ತಿಳಿಸಿದರು.
ಜಗಜಂಪಿ ಹ್ಯಾಪಿ ಹೋಮ್: ಜಗಜಂಪಿ ಉದ್ಯೋಗ ಸಮೂಹದಿಂದ ‘ಜಗಜಂಪಿ ಹ್ಯಾಪಿ ಹೋಮ್’ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುತ್ತಿದ್ದೇವೆ. ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲಾಗಿದೆ. ಸುಮಾರು 50 ರಿಂದ 60 ವರ್ಷದ 155 ದಂಪತಿಗಳು ವಾಸವಿರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು ನೆಮ್ಮದಿಯ ಆನಂದದ ಜೀವನ ನಡೆಸುವುದಕ್ಕೆ ಒಂದೇ ಸೂರಿನಡಿ ಸಕಲ ಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ ಎಂದು ತಿಳಿಸಿದರು.
ಜೀವನದಲ್ಲಿ ಆರ್ಥಿಕ ಸಬಲತೆಗಿಂತ ಸಂತಸ, ಆನಂದ, ನೆಮ್ಮದಿ ಬಹಳ ಮುಖ್ಯ ಆದರೆ ಇಂದು ಎಲ್ಲಾ ಇದ್ದೂ ಏನೂ ಇಲ್ಲದವರಂತೆ ಬದುಕು ಸಾಗಿಸುವ ದುಸ್ಥಿತಿ ಇದೆ. ಇಂದು ಹಲವು ಹಿರಿಯ ಪಾಲಕರು ಆರ್ಥಿಕವಾಗಿ ಸಶಕ್ತರಿದ್ದರೂ ನೆಮ್ಮದಿಯಿಂದ ಜೀವನ ಕಳೆಯಲು ಆಗುತ್ತಿಲ್ಲ. ಅನೇಕ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಅಥವಾ ಕೆಲಸಕ್ಕಾಗಿ ದೂರದ ದೇಶಗಳಲ್ಲಿ ಅಥವಾ ದೂರದ ಊರಲ್ಲಿ ನೆಲೆಸಿದ್ದರಿಂದ ಪಾಲಕರ ಬಗ್ಗೆ ಕಾಳಜಿ ವಹಿಸುವವರು ಇಲ್ಲದೆ ಪರದಾಡುತ್ತಿದ್ದಾರೆ. ಅಂತಹವರಿಗೆ ನೆರವಾಗಲೆಂದು ಈ ವಿಶಿಷ್ಟ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯಿಂದ 11 ಕಿ.ಮೀ. ಅಂತರದಲ್ಲಿ ಬೆಳಗುಂದಿ ರಸ್ತೆಯಲ್ಲಿ ಪ್ರಕೃತಿಯ ಸೊಬಗಿನ ವಾತಾವರಣದಲ್ಲಿ ವಿಶಿಷ್ಟ ಪರಿಕಲ್ಪನೆಯ ಅಪಾರ್ಟ್ಂಮೆಟ್ ತಲೆ ಎತ್ತಲಿದ್ದು ಇದು ನೂರಾರು ಕುಟುಂಬಗಳಲ್ಲಿ ಸಂತಸದ ಜೊತೆಗೆ ನೆಮ್ಮದಿಯ ಜೀವನ ಕಳೆಯಲು ನೆರವಾಗಲಿದೆ. “ಜಗಜಂಪಿ ಹಾಪಿ ಹೋಮ್” ನಲ್ಲಿ ವಾಸ ಮಾಡಬೇಕೆ ಎನ್ನುವವರು ಸಾಧ್ಯವಾದಷ್ಟು ಬೇಗನೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
“ಜಗಜಂಪಿ ಹ್ಯಾಪಿ ಹೋಮ್” ನಲ್ಲಿ ಹಲವು ಸೌಕರ್ಯಗಳು: ಪ್ರತಿ ದಂಪತಿ 15.55 ಲಕ್ಷ ರೂ. ಪಾವತಿಸಿದರೆ “ಜಗಜಂಪಿ ಹ್ಯಾಪಿ ಹೋಮ್”ನಲ್ಲಿ ಜೀವನ ಪೂರ್ತಿ ಇರಬಹುದು.ಯೋಗ, ಶಾಲೆ, ಈಜುಕೊಳ, ವಾಯುವಿಹಾರಕ್ಕೆ ಉದ್ಯಾನ, ವಾಕಿಂಗ್ ಟ್ರ್ಯಾಕ್ ಜೊತೆಗೆ ಪ್ರತಿ ಮನೆಗೆ ಹೈಟೆಕ್ ಪೀಠೋಪಕರಣ ಅಳವಡಿಸಲಾಗುವುದು ಎಂದರು.
ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಸಾವಯವ ಆಹಾರ ಪದಾರ್ಥಗಳಿಂದ ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 7 ವರೆಗೆ ಊಟ, ಉಪಾಹಾರ ವ್ಯವಸ್ಥೆ ಇರಲಿದೆ.
“ಜಗಜಂಪಿ ಹ್ಯಾಪಿ ಹೋಮ್”ನಲ್ಲಿ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸುವ ಮುಖಾಂತರ ಜನರಲ್ಲಿ ಆಧ್ಯಾತ್ಮಿಕ ಮನೋಭಾವ, ನೈತಿಕ ಮೌಲ್ಯ ಬೆಳೆಸಲಾಗುವುದು ಎಂದು ತಿಳಿಸಿದರು.
ಪ್ರತಿದಿನ ಬೆಳಗ್ಗೆ ವಾಯುವಿಹಾರ, ಧ್ಯಾನ, ಯೋಗ ಹಾಗೂ ಸಂಜೆ ವಚನ ಪಟನೆ, ಭಜನೆ, ಸತ್ಸಂಗ ದಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ದಿನನಿತ್ಯ ಆಯೋಜಿಸಲಾಗುವುದು ಎಂದು ಹೇಳಿದರು.