ದೇವರಶೀಗಿಹಳ್ಳಿ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ ಇವರು ಇಂದು ದೇವರಶೀಗಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಸಿಂಟೆಕ್ಸು, ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ಮಂಜೂರಾಗಿರುವ ಸ್ಮಾರ್ಟ್ ಬೋರ್ಡು ಹಾಗೂ ಶಿಕ್ಷಣ ಇಲಾಖೆ ಮತ್ತು ನರೇಗಾ ಯೋಜನೆ ಗ್ರಾಮ ಪಂಚಾಯತ್ ದೇವರಶೀಗಿಹಳ್ಳಿ ಇವರ ವತಿಯಿಂದ ನಿರ್ಮಿಸಲಾಗುತ್ತಿರುವ ಹೈಟೆಕ್ ಶೌಚಾಲಯವನ್ನು ಪರಿಶೀಲಿಸಿದರು.

ಶಾಲಾ ಕಟ್ಟಡ ಪರಿಶೀಲನೆ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ

ಈ ವೇಳೆ 6 ಮತ್ತು 7 ನೆಯ ತರಗತಿಯ ಮಕ್ಕಳೊಂದಿಗೆ ವರ್ಗ ಕೋಣೆಯಲ್ಲಿ ಚರ್ಚೆ ಮತ್ತು ಸಂವಾದ ಮಾಡಿ, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.

ಕುಡಿಯುವ ನೀರಿನ ಸಿಂಟೆಕ್ಸಗಳನ್ನು ಪರಿಶೀಲನೆ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಿಬ್ಬಂದಿ

ಸದರಿ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಸದಸ್ಯರ ದಾನಿಗಳ ನೆರವಿನಿಂದ ರೂಂ 120000 ವೆಚ್ಚ ಮಾಡಿ ಇಡೀ ಶಾಲೆಗೆ ಬಣ್ಣ ಹಾಗೂ ಚಿತ್ರಗಳನ್ನು ಬಿಡಿಸಿರುವುದನ್ನು ವೀಕ್ಷಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್.ಡಿ.ಎಮ್.ಸಿ. ಯವರ ಕಾರ್ಯವನ್ನು ಮನಸಾರೆ ಶ್ಲಾಘಿಸಿದರು

Share This Article
";