Thursday, September 19, 2024

ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ: ಕೃಷಿ ಕಾಯಿದೆ ವಾಪಸ್!

ನವದೆಹಲಿ(ನ.19): ದೇಶಾದ್ಯಂತ ಹಲವಡೆ ನಿರಂತರ ಮಳೆಯಿಂದ ರೈತರು ಬೇಸತ್ತು ಬೆಂಡಾಗಿ ಹೋಗಿದ್ದಾರೆ. ಇದರ ಹಿನ್ನೆಲೆ ಪ್ರಧಾನಿ ಮೋದಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದಾರೆ.

ನಮ್ಮ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿರುವ ಸಣ್ಣ ರೈತರು ಬಲಿಷ್ಠರಾಗಲು ನಾವು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಈ ಹಿಂದಿನ ಸರ್ಕಾರಗಳು ಕೂಡಾ ಈ ಕಾನೂನು ತರಲು ಚಿಂತನೆ ನಡೆಸಿದ್ದವು ಈ ಕಾನೂನು ರೈತ ವಿರೋಧಿ ನಿಲುವುಗಳನ್ನು ಹೊಂದಿರುವುದಾಗಿ ವ್ಯಾಪಕವಾಗಿ ರೈತರು ವಿರೋಧ ವ್ಯಕ್ತಪಡಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ರೈತರ ವ್ಯಾಪಕ ಹೋರಾಟಕ್ಕೆ ಮಣಿದು, ಮಸೂದೆ ಹಿಂಪಡೆಯುವ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದಾಗಿ ಭಾವುಕರಾಗಿ ಮೋದಿ ನುಡಿದರು.

ಪಂಜಾಬ್‌ ರಾಜ್ಯಾದ್ಯಂತ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ನೂತನ ಕೃಷಿ ಕಾಯ್ದೆಗೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಕೇಂದ್ರ ಸರ್ಕಾರ ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇದರ ಬೆನ್ನಲ್ಲೇ ಗುರು ಪೂರ್ಣಿಮೆ ದಿನದಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದು, ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಲು ತೀರ್ಮಾನಿಸಿದೆ. ಇದರೊಂದಿಗೆ ವರ್ಷಗಳ ರೈತರ ಹೋರಾಟಕ್ಕೆ ಗೆಲುವು ಸಿಕ್ಕಂತೆ ಆಗಿದೆ.

ನಾವು ರೈತರಿಗೆ ಸಮಂಜಸ ಬೆಲೆಯಲ್ಲಿ ಬಿತ್ತನೆ ಬೀಜಗಳು ಸಿಗುವಂತೆ ನೋಡಿಕೊಂಡಿದ್ದೆವು. ಇದರ ಜತೆಗೆ ಸಣ್ಣ ನೀರಾವರಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೆವು. 22 ಕೋಟಿ ಮಣ್ಣಿನ ಹೆಲ್ತ್‌ ಕಾರ್ಡ್‌ ನೀಡಿದ್ದೇವೆ. ಇದರಿಂದ ಕೃಷಿಯಲ್ಲಿ ಹೆಚ್ಚಿನ ಉತ್ಫಾದನೆ ಸಾಧ್ಯವಾಗಲಿದೆ. ಹೀಗಿದ್ದೂ ನೂತನ ಕೃಷಿ ಕಾಯ್ದೆಯ ಪ್ರಯೋಜನವನ್ನು ಜನರಿಗೆ ಅರ್ಥೈಸಲು ನಾವು ವಿಫಲರಾಗಿದ್ದೇವೆ ಎಂದರು.

ಇಂದು ಪವಿತ್ರ ಗುರುಪೂರಬ್ ದಿನವಾಗಿದ್ದು, ಈ ದಿನವೇ ಗುರು ನಾನಕ್ ಅವರನ್ನು ನೆನಪಿಸಿಕೊಂಡು ಮೋದಿ ಪಂಜಾಬ್‌ನಲ್ಲಿ ಹೆಚ್ಚು ವಿರೋಧ ವ್ಯಕ್ತವಾಗುತ್ತಿರುವುದರ ಹಿನ್ನೆಲೆ ನಾವು ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಲು ತೀರ್ಮಾನಿಸಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ರೈತರಿಗೆ ನೆರವಾಗುವ ಉದ್ದೇಶದಿಂದ ಹಾಗೂ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ಎಪಿಎಂಸಿ ಕಾಯ್ದೆಯನ್ನು ಮೋದಿ ಸರಕಾರ ಜಾರಿಗೊಳಿಸಲು ಚಿಂತನೆ ನಡೆಸಿತ್ತು. ಆದರೆ, ಒಂದು ವರ್ಗದ ರೈತರಿಂದ ಮೂಡಿ ಬಂದ ವಿರೋಧ ಹಾಗೂ ನಿರಂತರವಾಗಿ ದಿಲ್ಲಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳಿಂದ ಕೇಂದ್ರ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿರಬಹುದೆಂದು ವಿಶ್ಲೇಷಸಲಾಗುತ್ತಿದೆ. ಅಲ್ಲದೆ ಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಕೇಂದ್ರ ಸರಕಾರ ಎನ್ನಬಹುದು.

ಇತಿಹಾಸದ ಪುಟಗಳಲ್ಲಿ ದಾಖಲಾಗುವ ರೀತಿ ಮಳೆ ಚಳಿ ಲೆಕ್ಕಿಸದೇ ನಿರಂತರ ಹೋರಾಟದ ಮೂಲಕ ಮೋದಿ ಸರ್ಕಾರ ರೈತರ ಮುಂದೆ ಮಂಡಿಯೂರುವಂತೆ ಮಾಡಿರುವುದು ನಿಜಕ್ಕೂ ರೈತ ಹೋರಾಟ ಕ್ಕೆ ಸಂದ ಜಯ ಎನ್ನಬಹುದು.

 

ಜಿಲ್ಲೆ

ರಾಜ್ಯ

error: Content is protected !!