ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಥಮ ಬಾರಿಗೆ ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಿರುವ ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಅವರ ಪರವಾಗಿ ಬೆಳಗಾವಿ ಕನ್ನಡ ಭವನದಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಧನ ಹಾಗೂ ವಾಹನ ಪಡೆಯದೇ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಸೇವೆ ಸಲ್ಲಿಸುವುದಾಗಿ ಮುಲಾಲಿ ಹೇಳಿದ್ದಾರೆ ಹಾಗೂ ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಾರಣ ರಾಜ್ಯದ ಗೌರವಾನ್ವಿತ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ರಾಜಶೇಖರ ಮುಲಾಲಿ ತಮ್ಮ ಅತ್ಯಮೂಲ್ಯವಾದ ಮತವನ್ನು ಹಾಕುವುದರ ಮುಖಾಂತರ ಆಶೀರ್ವದಿಸಿ ನಿಶ್ವಾರ್ಥ ಸೇವೆ ಮಾಡುವ ಅವಕಾಶವನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲೆಯ ಕನ್ನಡ ಪರ ಹೋರಾಟಗಾರ ಶಿವಾನಂದ ತಂಬಾಕೆ, ಅಖಿಲ ಕರ್ನಾಟಕ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ನಿವೃತ್ತ ಯೋಧರು ಹಾಗೂ ಸಮಾಜ ಸೇವಕರಾದ ವೀರು ದೊಡ್ಡವೀರಪ್ಪನವರ, ಗೋಕಾಕ ತಾಲೂಕು ಕಸಾಪ ಸದಸ್ಯರು ಖ್ಯಾತ ವೈದ್ಯರಾದ ಡಾ. ಮಂಜುನಾಥ ಮುರಗೋಡ, ಅಥಣಿಯ ತಾಲೂಕು ಕಸಾಪ ಸದಸ್ಯರು ಖ್ಯಾತ ವೈದ್ಯರಾದ ಡಾ. ರಾಘವೇಂದ್ರ ಕುಲಕರ್ಣಿ, ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಬಸವರಾಜ ಚಿನಗುಡಿ, ಆರ್.ಬಿ,ಎಸ್‌ನ ಸಂಸ್ಥಾಪಕ ಅಧ್ಯಕ್ಷ ಉಮೇಶ ಗೌರಿ ಸೇರಿದಂತೆ ಇನ್ನೂ ಅನೇಕರು ಮನವಿ ಮಾಡಿಕೊಂಡರು.