ಸುದ್ದಿ ಸದ್ದು ನ್ಯೂಸ್
ಹಳಿಯಾಳ : ಕೆನರಾ ಬ್ಯಾಂಕ ಹಾಗೂ ದೇಶಪಾಂಡೆ ರುಡಸೆಟ್ ಸಂಸ್ಥೆಯ ವತಿಯಿಂದ “ಸ್ವಚ್ಛ ಭಾರತ್ ಮಿಷನ್” ಅಡಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಬಳಸುವ “ಸ್ವಚ್ಛ-ವಾಹಿನಿ” ಗಳನ್ನು ಓಡಿಸಲು ಗ್ರಾಮೀಣ ಸ್ವಸಹಾಯ ಸಂಘದ ಮಹಿಳೆಯರಿಗೆ ಲಘು ವಾಹನ ಚಾಲನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಪ್ರಯೋಗವಾಗಿದ್ದು ಪ್ರಥಮ ಬ್ಯಾಚಿನ 09 ಜನ ಸ್ವಸಹಾಯ ಸಂಘದ ಮಹಿಳೆಯರಿಗೆ ಲಘು ವಾಹನ ಚಾಲನಾ ಕೌಶಲ್ಯದ ಜೊತೆಗೆ ಜೀವನ ಕೌಶಲ್ಯ ಹಾಗೂ ಬ್ಯಾಂಕಿಂಗ್ ಸೇವೆಗಳ ಕುರಿತು ತರಬೇತಿ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಕಾ ರವರು ಸಂಸ್ಥೆಗೆ ಭೇಟಿ ನೀಡಿ, ಪ್ರಮಾಣ ಪತ್ರವನ್ನು ವಿತರಿಸಿ “ಸ್ವಚ್ಛ-ವಾಹಿನಿ” ವಾಹನಗಳಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ಕೆನರಾ ಬ್ಯಾಂಕ್ ಮತ್ತು ದೇಶಪಾಂಡೆ ರುಡಸೆಟ್ ಸಂಸ್ಥೆ ಕೈ ಜೋಡಿಸುವ ಮೂಲಕ ಸ್ವಚ್ಚ ಭಾರತ ಅಭಿಯಾನಕ್ಕೆ ಬಲ ಬಂದಂತಾಗಿದೆ. ಅಲ್ಲದೆ ದೇಶಪಾಂಡೆ ರುಡಸೆಟ್ ಸಂಸ್ಥೆ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಸ್ವ-ಉದ್ಯೋಗ ತರಬೇತಿಗಳನ್ನು ಆಯೋಜಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕರಿಸುತ್ತಿದೆ.ಎಂದರು.
ಈ ವೇಳೆ ಸಂಸ್ಥೆಯ ನಿರ್ದೇಶಕರು, ಕಾರ್ಯಕಾರಣಿ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿಗಳು, ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು, ಮಹಿಳಾ ಉದ್ಯಮಿಗಳು, ಕೆನರಾ ಬ್ಯಾಂಕ್ ಮತ್ತು ದೇಶಪಾಂಡೆ ರುಡಸೆಟ್ ಸಂಸ್ಥೆಯ ಸಿಂಬಂದ್ಧಿ ವರ್ಗದವರು ಇದ್ದರು.