ಬಾರ್‌ಗಳಿಗೆ ಕನ್ನಹಾಕಿ ನಗದು ದೋಚುತ್ತಿದ್ದ ಅಂತರರಾಜ್ಯ ಕಳ್ಳನ ಬಂಧನ

ಉಮೇಶ ಗೌರಿ (ಯರಡಾಲ)

 

ಸುದ್ದಿ ಸದ್ದು ನ್ಯೂಸ್ 

ಮುಂಡಗೋಡ: ಸುಮಾರು ಮೂರು ತಿಂಗಳ ಹಿಂದೆ ಪಟ್ಟಣದಲ್ಲಿ ಇರುವ ವೈನ್ ಶಾಪ್‌ವೊಂದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ನಾಸೀರ್ ಮದ್ನಳ್ಳಿ (33) ಕಳ್ಳನನ್ನು ಇತ್ತೀಚೆಗೆ ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ಮೇಲ್ಚಾವಣಿಗೆ ಅಳವಡಿಸಿದ ಸೀಟು ತೆಗೆದು ಕಳ್ಳತನ ಮಾಡಿದ್ದುತ್ತ

ಬಂಧಿತ ಆರೋಪಿ ಆಗಸ್ಟ್ 19ರಂದು ಪಟ್ಟಣದ ವೈನ್ ಶಾಪ್ ಒಂದರ ಮೇಲ್ಛಾವಣಿಯ ಹಂಚು ತೆಗೆದು ಅಂಗಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತ ಆರೋಪಿ ನಾಸೀರ್ ಮದ್ನಳ್ಳಿ ಆತನ ಬಳಿ ಇದ್ದ 37 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ತನಿಖೆ ವೇಳೆ ಅಣ್ಣಿಗೇರಿ, ಕೇರೂರ, ಕೊಲ್ಲೂರು, ಬ್ಯಾಡಗಿ, ಗದಗ, ಕೊಪ್ಪಳ, ಯರಗಟ್ಟಿ, ಘಟಪ್ರಭಾ, ಹುಬ್ಬಳ್ಳಿ, ಸವದತ್ತಿ, ಸಾಗರ, ಹರಪನಹಳ್ಳಿ, ಯಾದಗಿರಿ ಸೇರಿದಂತೆ ಇನ್ನೂ ಅನೇಕ ಬಾರ್‌ಗಳಲ್ಲಿ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮುುಂಡಗೋಡ ಪೊಲೀಸರು ತಿಳಿಸಿದ್ದಾರೆ.

Share This Article
";