ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರ

ಬಾಲಿವುಡ್ ನಟಿ ಕಂಗನಾ ರಣಾವತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ನಂತರ ಟೈಮ್ಸ್ ನೆಲದ ಎಂಬ ಖಾಸಗಿ ಚಾನಲ್ ವೂಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಸ್ವಾತಂತ್ರ್ಯ ಕುರಿತಾದ ಚರ್ಚೆಯ ಸಂದರ್ಭ ನಿಜಕ್ಕೂ ಬಾರತ ಸ್ವತಂತ್ರಗೊಂಡಿದ್ದು 2014 ರಲ್ಲಿ ಅದು ನರೇಂದ್ರ ಮೋದಿ ಅವರಂಥ ಸಮರ್ಥ ಪ್ರಧಾನಿ ಈ ದೇಶವನ್ನು ಸ್ವತಂತ್ರ ಗೊಳಿಸಿದ್ದು ಅನ್ನೋ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಾತ್ಮ ಗಾಂಧಿ ಸುಭಾಷ್ ಚಂದ್ರ ಬೋಸ್ ಸುಖದೇವ ಬಾಲ್ ಗಂಗಾಧರ ತಿಲಕ ರಾಣಿ ಚನ್ನಮ್ಮ ಮುಂತಾದ ಸಹಸ್ರ ಸಂಖ್ಯೆಯ ದೇಶಭಕ್ತರ ಪ್ರಾಣತ್ಯಾಗದಿಂದ ಅವರ ನೆತ್ತರು ಚೆಲ್ಲಿದ ಪ್ರತಿಫಲದಿಂದ ಈ ದೇಶ ಸ್ವಾತಂತ್ರ್ಯ ಪಡೆದಿದೆ ಅನ್ನೋ ಯಕಶ್ಚಿತ ಸಾಮಾನ್ಯ ಅರಿವು ಇಲ್ಲದೇ ಪದ್ಮಶ್ರೀ ಕೊಟ್ಟ ಸರ್ಕಾರವನ್ನು ಹೊಗಳುವ ಭರಾಟೆಯಲ್ಲಿ ಈ ರೀತಿಯ ಹೇಳಿಕೆ ನೀಡುವ ಮೂಲಕ ನೆಟ್ಟಿಗರ ಸಿಟ್ಟಿಗೆ ಗುರಿಯಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸುದ್ದಿ ಆಗಿದ್ದು ಅನೇಕ ಹಿರಿಯರು ರಾಜಕಾರಣಿಗಳು ನಟರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ಟೀಕಿಸುವ ಭರಾಟೆಯಲ್ಲಿ ಈ ನಟಿಯ ಹೇಳಿಕೆ ತುಂಬ ಅಸಮಾಧಾನ ಉಂಟು ಮಾಡಿದ್ದು ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಪ್ರಾಣ ತೆತ್ತ ವೀರ ಹೋರಾಟಗಾರರಿಗೆ ಮಾಡಿದ ಅವಮಾನ ಇದು ಎಂದು ಖಂಡಿಸಲಾಗುತ್ತಿದೆ.

Share This Article
";