ಭ್ರಷ್ಟರಿಗೆ ಪಾಲಿನ ಸಿಂಹ ಸ್ವಪ್ನರಾಗಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ನಿಧನ

ಉಮೇಶ ಗೌರಿ (ಯರಡಾಲ)

ಬೆಂಗಳೂರು: 1984ರಲ್ಲಿ ಅಂದಿನ ಮುಖಮಂತ್ರಿ ದಿ. ರಾಮಕೃಷ್ಣ ಹೆಗಡೆ ಸ್ಥಾಪಿಸಿದ ಲೋಕಾಯುಕ್ತ ಸಂಸ್ಥೆಯ ಮೊದಲ ಲೋಕಾಯುಕ್ತರಾಗಿ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ (89) ನಿಧನರಾಗಿದ್ದಾರೆ.

ವೆಂಕಟಾಚಲಯ್ಯನವರನ್ನು ಅನಾರೋಗ್ಯ ಕಾರಣದಿಂದ ಬೆಳಗ್ಗೆ 6:೦೦ ಕ್ಕೆ ಬೆಂಗಳೂರಿನಲ್ಲಿ ಇರುವ ಎಂ,ಎಸ್, ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದು ಬಂದಿದೆ.

ಅವರು ಮೂವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ವೆಂಕಟಾಚಲಯ್ಯ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ 1960, ಜುಲೈ 3ರಂದು. ಜನಿಸಿದ್ದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದ, ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. 2001 ಜುಲೈ 2 ರಂದು ಲೋಕಾಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರಚನೆಯಾದ ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯ ಮೊದಲ ಮುಖ್ಯಸ್ಥರಾಗಿ ಒತ್ತಮ ಕೆಲಸ ಮಾಡಿದ್ದರು. ನಾಲ್ಕೂವರೆ ವರ್ಷಗಳ ಕಾಲ ಲೋಕಾಯುಕ್ತರಾಗಿದ್ದ ಅವರು ಬರೋಬ್ಬರಿ 50 ಸಾವಿರ ಪ್ರಕರಣಗಳನ್ನು ದಾಖಲು ಮಾಡಿ, ತನಿಖೆ ನಡೆಸಿದ ಸಾಧನೆ ಮಾಡಿದ್ದಾರೆ.

Share This Article
";