Thursday, September 19, 2024

ರೈತರು ಹಲವಾರು ದೃಷ್ಟಿಯಿಂದ ವಂಚಿತರಾಗಿದ್ದಾರೆ: ಆಫ್ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್

ಬೆಳಗಾವಿ: ಕರ್ನಾಟಕವು ಭಾರತದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದ್ದು, ವರ್ಷಕ್ಕೆ ಸುಮಾರು 450 ಲಕ್ಷ ಟನ್ ಕಬ್ಬನ್ನು ನುರಿಸಿ 45 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡುತ್ತಿದೆ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ರೈತರು ಹಲವಾರು ದೃಷ್ಟಿಯಿಂದ ವಂಚಿತರಾಗಿದ್ದಾರೆ ಎಂದು ಆಮ್ ಆದ್ಮ ಪಕ್ಷದ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ಅವರು ಹೇಳಿದರು.

ಇಂದು ಮಂಗಳವಾರ ‌ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಬಾಕಿ ಹಣವನ್ನು ಸನ್ 2020-21 ರೊಳಗಾಗಿ ರೈತರಿಗೆ ಪಾವತಿಸಬೇಕು. ಕಬ್ಬು ಬೆಳೆಯ ಬೆಂಬಲ ಬೆಲೆಯು ಸನ್ 2021-22ಕ್ಕೆ 3500 ರೂಗೆ ಕಟಾವು ಹಾಗೂ ಸಾಗಾಣಿಕೆ ವೆಚ್ಚ ಹೊರತಡುಪಡಿಸಿ ನಿಗಧಿಪಡಿಸಬೇಕು. ಪ್ರತಿಯೊಂದು ಸಕ್ಕರೆ ಕಾರಖಾನೆಯಲ್ಲಿ ತೂಕ ಮತ್ತು ಅಳತೆ ನ್ಯಾಯಯುತವಾಗಿ ನಡೆಯುವಂತೆ ಅಥವಾ ಪರಿವೀಕ್ಷಕರನ್ನು ನೇಮಿಸಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕಬ್ಬು ನೀಡಿದ 14 ದಿವಸದೊಳಗಾಗಿ ಸಂಪೂರ್ಣ ಹಣ ಪಾವತಿಸುವಂತೆ ಕ್ರಮ ಕೈಕೊಳ್ಳಬೇಕು. ಸರಕಾರವು ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಕ ಹಣ ನೀಡಲು ಒಂದು ಕಮೀಟಿ ರಚಿಸಬೇಕು.

ಅದರಂತೆ ಎಲ್ಲ ಕಾರಖಾನೆ ನಡೆಸುವವರಿಗೆ ಏಕಕಾಲಕ್ಕೆ ಒಂದೇ ಸಮಯದಲ್ಲಿ ಕಬ್ಬು ನುರಿಸುವ ಕುರಿತು ಸೂಕ್ತ ಕ್ರಮ ಜರುಗಿಸುವ ಸಲುವಾಗಿ ಒಂದು ತಂಡ ರಚಿಸಬೇಕೆಂದು ಆಮ್ ಆದ್ಮ ಪಕ್ಷವು ಆಗ್ರಹಿಸುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ ಮುಗಿದ ಬಳಿಕ ಆಮ್‌ ಆದ್ಮಿ ಪಕ್ಷದ ಪದಾಧಿಕಾರಿಗಳು ಕನ್ಮಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಎಸ್.ವಾಯ್. ಕಲಾರಕೊಪ್ಪ, ಮುಖ್ಯ ಸಂಘಟನಾ ಕಾರ್ಯದರ್ಶಿ ಶತಕರ ಹೆಗಡೆ, ಕಾರ್ಯದರ್ಶಿಅಬ್ದುಲ್ ಶೇಖ, ಚಿಕ್ಕೋಡಿ ಅಧ್ಯಕ್ಷ ಕುಮುದಿನಿ ಬೈರಣ್ಣವರ, ಖಾನಾಪೂರ ತಾಲೂಕಾಧ್ಯಕ್ಷ ಭೈರು ಪಾಟೀಲ್ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!