ಸಂಶೋಧನಾ ವಿದ್ಯಾರ್ಥಿಗೆ ಶರಣ ಕಥಾಮಲೆ ಕಿರು ಹೊತ್ತಿಗೆ ನೀಡಿ ಗೌರವ

ಉಮೇಶ ಗೌರಿ (ಯರಡಾಲ)

ಧಾರವಾಡ:ಕೇಂದ್ರ ಬಸವ ಸಮಿತಿ 52 ಶರಣರ ಕುರಿತು ಪ್ರಕಟಿಸಿರುವ  ಶರಣ ಕಥಾಮಾಲೆ ಕಿರು ಹೊತ್ತಿಗೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರದ ಸಂಶೋಧನ ವಿದ್ಯಾರ್ಥಿಯಾದ  ಅಶೋಕ ಪಾಟೀಲ್ ರವರಿಗೆ ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿ  ಡಿ. ವಿ. ಹಾಲಬಾವಿ ರಾಷ್ಟ್ರೀಯ ಸ್ಮಾರಕ ಹಾಗೂ ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ನೀಡಿ ಗೌರವಿಸಿದರು.

ಧಾರವಾಡ ರಂಗಾಯಣದ ನಿರ್ದೇಶಕರಾದ ರಮೇಶ ಎಸ್. ಪರವಿನಾಯ್ಕರ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ ಬಸವನಗೌಡ ಪಾಟೀಲ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಬೋಧಕರಾದ ಡಾ. ಸಂದೀಪ್ ಜಾನೆಕುಂಟೆ ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";